ಭಾವಪೂರ್ಣ ಶ್ರದ್ಧಾಂಜಲಿ
ಲೋಕನಾಯಕ
ಡಾ. ಭೀಮಣ್ಣ ಖಂಡ್ರೆ
ಮಾಜಿ ಸಚಿವರು, ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಲಿಂಗಾಯತ ಸಮಾಜದ ಮೇರು ನಾಯಕರ
ಅವರು ಇಂದು ವಯೋಸಹಜ ಕಾರಣಗಳಿಂದ ವಿಧಿವಶರಾದ ಸುದ್ದಿ ಅತ್ಯಂತ ದುಃಖಕರವಾಗಿದೆ. ಸೇವೆ, ತ್ಯಾಗ ಮತ್ತು ಮೌಲ್ಯಾಧಾರಿತ ಜೀವನವೇ ಅವರ ಮಹಾನ್ ವ್ಯಕ್ತಿತ್ವದ ಗುರುತಾಗಿತ್ತು. ಸಮಾಜದ ಹಿತಕ್ಕಾಗಿ ಅವರು ನಡೆಸಿದ ಹೋರಾಟ, ತೋರಿದ ದಾರಿ ಹಾಗೂ ಅವರ ಆದರ್ಶಗಳು ಸದಾ ನಮ್ಮೆಲ್ಲರಿಗೂ ಪ್ರೇರಣೆಯ ದೀಪವಾಗಿವೆ.
ಅವರ ಪವಿತ್ರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ. ಈ ದುಃಖದ ಘಳಿಗೆಯಲ್ಲಿ ಅವರ ಕುಟುಂಬ ಸದಸ್ಯರಿಗೆ, ಬಂಧುಮಿತ್ರರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
