ಮಾನ್ವಿ : ಗುತ್ತೇದಾರರಾದ ಸೈಯದ್ ಅಕ್ಬರ್ ಪಾಶ ಹುಸೇನಿ ಅವರು ತಮ್ಮ ಮಗ ಆತೀಫ್ ಪಾಶ ಅವರ ಮದುವೆಯ ದಿನದಂದೇ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ 121 ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಪಾಟೀಲ್ ಹೇಳಿದರು.
ಜನವರಿ 18ರಂದು ಮುಸ್ಲಿಂ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವಕ–ಯುವತಿಯರಿಗಾಗಿ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಲು ಅಕ್ಬರ್ ಪಾಶ ಅವರು ಮುಂದಾಗಿದ್ದಾರೆ. ದುಬಾರಿ ಮದುವೆಗಳ ಹೊರೆ ತಪ್ಪಿಸಿ, ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಸಮಾಜಸೇವಾ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ರವಿ ಪಾಟೀಲ್ ತಿಳಿಸಿದರು.
ಈ ರೀತಿಯ ಮಾನವೀಯ ಕಾರ್ಯದಿಂದ ಸಮಾಜದಲ್ಲಿ ಸಮಾನತೆ, ಸಹಕಾರ ಹಾಗೂ ಸಹಾನುಭೂತಿಯ ಸಂದೇಶ ಹರಡುತ್ತದೆ. ಇಂತಹ ಕಾರ್ಯಕ್ರಮಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಶಿರುದ್ದೀನ್, ಮಾಜಿ ಪುರಸಭೆ ಅಧ್ಯಕ್ಷರಾದ ಎಂಡಿ. ಇಸ್ಮಾಯಿಲ್ ಸಾಬ್, ಸೈಯದ್ ಹುಸೇನ್, ಎಂ.ಹೆಚ್.ಎಂ. ಮುಖಿಂ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.


