ತಾಳಿಕೋಟಿ: ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕವಾಗಿವೆ ಎಲ್ಲಾ ಹಬ್ಬಗಳ ಹಿಂದೆ ಒಂದು ಶ್ರೇಷ್ಠ ಸಂದೇಶವಿದೆ ಅದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.ಮಕರ ಸಂಕ್ರಾಂತಿ ಪರಸ್ಪರ ಬಾಂಧವ್ಯ ಬೆಸೆದು ಪ್ರೀತಿ ವಿಶ್ವಾಸವನ್ನು ಹೆಚ್ಚಿಸುವ ಹಬ್ಬವಾಗಿದೆ ಎಂದು ಬಿ.ಸಾಲವಾಡಗಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ,ಸಾಹಿತಿ ಸುಮಂಗಲಾ ಕೋಳೂರ ಹೇಳಿದರು. ಗುರುವಾರ ಪಟ್ಟಣದ ಎಸ್ ಕೆ ಬಡಾವಣೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಸಂಕ್ರಮಣದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಕೆಲವು ವರ್ಷಗಳಿಂದ ಈ ಬಡಾವಣೆಯ ನಮ್ಮೆಲ್ಲ ಸಹೋದರಿಯರು ಕೂಡಿಕೊಂಡು ವಿಶೇಷ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ ಹಬ್ಬಗಳನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ ಹಿನ್ನೆಲೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಇದಕ್ಕೆ ನಮ್ಮೆಲ್ಲ ಸಹೋದರಿಯರು ಸಹಕರಿಸುತ್ತಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸೇರಿದ ಬಡಾವಣೆಯ ನೂರಾರು ಮಹಿಳೆಯರು ಎಳ್ಳು ಬೆಲ್ಲ ಸಿಹಿವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಶರಣೆ ಶಾಂತಮ್ಮ ತಾಯಿ ಕೋಳೂರ, ಶರಣೆ ಕಾಶಿಬಾಯಿ ಬಂಟನೂರ, ಶರಣೆ ದೇವಕ್ಕಮ್ಮ ಮದರಕಲ್, ಸುನಂದಾ ಪಾಟೀಲ, ವಿಜಯಲಕ್ಷ್ಮಿ ಕೆಸರಭಾವಿ, ರಾಜೇಶ್ವರಿ ಪಾಟೀಲ, ಪ್ರತಿಭಾ ಬಿರಾದಾರ, ಶಕುಂತಲಾ ದೇಸಾಯಿ, ಸುಮಾ ಮದುಕಲ್, ಗಣ್ಯರಾದ ಮಲ್ಲನಗೌಡ ಪಾಟೀಲ, ಭೀಮನಗೌಡ ದ್ಯಾಪೂರ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *