ಮೈಸೂರು, ದಿನಾಂಕ: 20 ನವೆಂಬರ್, 2025 ರಂದು, ಆವಾಸ್ ಮತ್ತು ನಗರ ವ್ಯವಹಾರ ಮಂತ್ರಾಲಯ (MoHUA) ಮತ್ತು ಕರ್ನಾಟಕ ಸರ್ಕಾರದ ಮಾರ್ಗದರ್ಶನದಲ್ಲಿ, ಮೈಸೂರು ಮಹಾನಗರ ಪಾಲಿಕೆ (MCC) ಮತ್ತು ರಾಯಚೂರು ಮಹಾನಗರ ಪಾಲಿಕೆ (RMC) ನಡುವೆ ‘ಸ್ವಚ್ಛ ಶಹರ್ ಜೋಡಿ’ ಒಡಂಬಡಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಶುಭ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರು ತಿಳಿಸಿದಂತೆ, ಈ ಜೋಡಿ ಒಡಂಬಡಿಕೆಯ ಮೂಲಕ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆ (Swachh Survekshan), ODF+ ಮತ್ತು GFC ಸ್ಟಾರ್ ರೇಟಿಂಗ್ಗಳಲ್ಲಿ ಉತ್ತಮ ಅಂಕಗಳನ್ನು ಸಾಧಿಸಲು ಮತ್ತು ಇತರೆ ಸ್ವಚ್ಛತೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ರಾಯಚೂರು ಮಹಾನಗರ ಪಾಲಿಕೆಗೆ ಸಕ್ರಿಯ ಸಹಕಾರ ನೀಡಲಿದೆ.

ಈ ಸಹಕಾರದ ಭಾಗವಾಗಿ, ಪ್ರತಿ ಎರಡು ವಾರಗಳಿಗೊಮ್ಮೆ ಎಲ್ಲಾ ರೀತಿಯ ದಾಖಲೆಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಸಾಮಗ್ರಿಗಳನ್ನು ಹಂಚಿಕೊಳ್ಳಲಾಗುವುದು. ಜೊತೆಗೆ, ವರ್ಚುವಲ್ ಕಾನ್ಫರೆನ್ಸ್ (VC) ಮೂಲಕ ನಿಯಮಿತ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲಾಗುವುದು. ಈ ಕ್ರಮವು ರಾಯಚೂರು ಮಹಾನಗರ ಪಾಲಿಕೆಯು ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಹಾಯಕವಾಗಲಿದೆ.

ಈ ಕಾರ್ಯಕ್ರಮದಲ್ಲಿ ಗೌರವಾನೀತ ಆಯುಕ್ತರು, ಶ್ರೀ ಶೇಕ್ ತನ್ವೀರ್ ಆಸಿಫ್ (ಮೈಸೂರು ಮಹಾನಗರ ಪಾಲಿಕೆ), ಶ್ರೀ ಮಲ್ಲಿಕಾರ್ಜುನ ಬಿ.ಎಂ. (ವಲಯ ಆಯುಕ್ತರು, ರಾಯಚೂರು ಮಹಾನಗರ ಪಾಲಿಕೆ), ಶ್ರೀ ನರ್ಸರೆಡ್ಡಿ (ಮುಖ್ಯ ಅಧಿಕಾರಿ, ಮಸ್ಕಿ), ಮತ್ತು ಶ್ರೀ ಮೃತುಂಜಯ (ಸಹಾಯಕ ಕಾರ್ಯಪಾಲಕ ಅಭಿಯಂತರರು – ಪರಿಸರ, ಮೈಸೂರು ಮಹಾನಗರ ಪಾಲಿಕೆ) ಅವರುಗಳು ಗಣ್ಯರಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *