ರಾಯಚೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶರಣ ಪ್ರಕಾಶ ಪಾಟೀಲ್ ಸರ್ ಅವರಿಗೆ ವಿಕಾಸ ಸೌಧದ 123 ನೇ ಕೊಠಡಿಯ ಸಭಾಂಗಣದಲ್ಲಿ ಭೇಟಿಯಾಗಿ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆ ಬಗ್ಗೆ, ಹಾಗೂ 20 ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದ ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ರವರ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಪ್ರಧಾನ ಮಂತ್ರಿಗಳಿಗೆ ತಾವುಗಳು ಒತ್ತಾಯ ಮಾಡುವುದರ ಜೊತೆಗೆ ಶೀಘ್ರದಲ್ಲಿ ಭತ್ತ, ತೊಗರಿ, ಹೈಬ್ರಿಡ್ ಜೋಳ, ಕಡಲೆ ಖರೀದಿ ಕೇಂದ್ರ ತೆರೆದು ಜಿಲ್ಲೆಯ ಭತ್ತ,ತೊಗರಿ, ಹೈಬ್ರಿಡ್ ಜೋಳ , ಕಡಲೆ ಉತ್ಪನ್ನಗಳ ಖರೀದಿ ಕೇಂದ್ರ ವನ್ನು ಶೀಘ್ರದಲ್ಲಿ ತೆರೆದು ಷರತ್ತು ರಹಿತವಾಗಿ ಖರೀದಿಸುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯುವಲು ಹಾಗೂ ಜಿಲ್ಲೆಯಲ್ಲಿ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ನೀಲಕಂಠೇಶ್ವರ ಭತ್ತದ ಸ್ಥಳೀಯ ಬೀಜ ತುಂಬಾ ಕಳಪೆ ಮಟ್ಟದಾಗಿದ್ದರಿಂದ ಈ ವರ್ಷ ರೈತರ ಉತ್ಪಾದನೆ ಪ್ರತಿ ಎಕರೆಗೆ 50 ಚೀಲ ಬರುವ ಬದಲಿಗೆ ಕೇವಲ 15 ರಿಂದ 20 ಚೀಲ ಬಂದಿರುವ ಕಾರಣ ರೈತರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಆ ಕಾರಣಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಕ್ರಮ ವಹಿಸುವಂತೆ ಸೂಚಿಸಿ ಕಂಪನಿ ಕಡೆಯಿಂದ ಅಥವಾ ಬೀಜ ಮಾರಾಟ ಮಾಡಿದ ಸಿಂಧನೂರು ತಾಲೂಕಿನ ಗಾಂಧಿನಗರದ ಟ್ರೇಡರ್ಸ್ ರವರಿಂದ ನಷ್ಟವನ್ನು ಕೊಡಿಸುವಂತೆ, ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಮರಳಿ ಸುಲ್ತಾನಪುರ.
ರಾಜ್ಯ ಕಾರ್ಯಾಧ್ಯಕ್ಷರಾದ ಮಹೇಶ ಗೌಡ ಎಂ ಸುಬೇದಾರ್.
ರಾಜ್ಯ ಪ್ರಧಾನ ಸಂಚಾಲಕರಾದ ನಾಗಯ್ಯ ಸ್ವಾಮಿ ದೇಸಾಯಿ ಗುರು. ರಂಗನಗೌಡ ಪೋಲಿಸ್ ಪಾಟೀಲ್ ಸುರಪುರ. ಪ್ರಕಾಶ ಶಹಪುರ,
ಕರಿಯಪ್ಪ ಕರಿಗಾರ ಹಾವೇರಿ ಜಿಲ್ಲಾ ಮುಖಂಡರು. ರಾಯಚೂರು ತಾಲೂಕ ಅಧ್ಯಕ್ಷರಾದ ಚನ್ನಪ್ಪ ಹುಣಸಿಹಾಳ ಹುಡ. ಹನುಮಂತ ಹುಣಸಗಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *