ತಾಳಿಕೋಟಿ: ಮೈಲೇಶ್ವರದ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದರ ಕಲಾ ವೈಭವ ಕಾರ್ಯಕ್ರಮ ಇಂದು ಮತ್ತು ನಾಳೆ (ಜ.16,17) ಎರಡು ದಿನಗಳ ಕಾಲ ಶಾಲಾ ಆವರಣದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 9.30 ಘಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಪೂಜ್ಯಶ್ರೀ ಸಿದ್ದಲಿಂಗ ದೇವರು ಹಾಗೂ ಕೋಲಾರದ ಶ್ರೀ ಪಟ್ಟದೇವರು ಹಿರೇಮಠದ ಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಸಮಾರಂಭವನ್ನು ಉದ್ಘಾಟಿಸುವರು. ತಾಳಿಕೋಟಿ ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ, ಶಿಕ್ಷಣ ಸಂಯೋಜಕ ಎಸ್ ಎಸ್ ಹಿರೇಮಠ, ಸಿ ಆರ್ ಸಿ ಕೆ.ಎಸ್.ಸಜ್ಜನ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಮೂರುಮಾನ ಅವರ ಗೌರವ ಉಪಸ್ಥಿತಿ ಇರುವುದು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ನಾಳೆ ದಿನಾಂಕ: 17-01-2026 ಶನಿವಾರ ಬೆಳಿಗ್ಗೆ 9.30 ಘಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಾಲಹಳ್ಳಿ ಸಂಸ್ಥಾನ ಬ್ರಹನ್ಮಠದ ಪೂಜ್ಯ ಶ್ರೀ ಷ.ಬ್ರ. ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ತಾಳಿಕೋಟಿಯ ಪೂಜ್ಯ ಶ್ರೀ ಸಿದ್ದಲಿಂಗ ದೇವರು ವಹಿಸುವರು.ತೆಲಸಂಗದ ಜ್ಞಾನಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಭರಮಣ್ಣ ಕಾಮನ್ ಸಮಾರಂಭ ಉದ್ಘಾಟಿಸುವರು. ಕಾರ್ಕಳದ ಅಂಕಣಕಾರರು, ಉಪನ್ಯಾಸಕಿ ಅಕ್ಷಯಾ ಗೋಖಲೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶ್ರೀ ಮಾರುತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್‌ಬಿ ನಡುವಿನಮನಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಆರ್. ಬಿ.ನಡುವಿನಮನಿ, ಕಾರ್ಯದರ್ಶಿ ಎಮ್.ಬಿ.ಮಡಿವಾಳರ, ನಿರ್ದೇಶಕ ಎಸ್.ಹೆಚ್.ಪಾಟೀಲ, ನಿರ್ದೇಶಕಿ ಎಲ್.ಎಂ.ಬಿರಾದಾರ,ಎನ್.ಎಸ್.ಗಡಗಿ, ನಿರ್ದೇಶಕ ಶಶಿಧರ ಎಮ್.ಬಿರಾದಾರ, ಮುಖ್ಯೋಪಾಧ್ಯಾಯರು ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು. ವೇದಿಕೆ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
