ತಾಲೂಕಿನ ಪಗಡದಿನ್ನಿ, ಗೋನವಾರ ಗ್ರಾ.ಪಂ.ಗೆ ಭೇಟಿ ನೀಡಿದ ಸಹಾಯಕ ನಿರ್ದೇಶಕ ಯಂಕಪ್ಪ, ನರೇಗಾ ಯೋಜನೆ ಅಯಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಪರಿಶೀಲಿಸಿ, ನರೇಗಾ ಕಾಮಗಾರಿ ಕಡತಗಳನ್ನು ಹಾಗೂ ಏಳು ವಾಹಿನಿ ಪುಸ್ತಕಗಳನ್ನು ಪರಿಶೀಲಿಸಿದರು.
ಕರ ವಸೂಲಾತಿ ಬಗ್ಗೆ ಸಿಬ್ಬಂದಿ ವರ್ಗದವರೊಂದಿಗೆ ವಿಚಾರಣೆ ಮಾಡಿ, ನೀಡಿದ ಗುರಿ ಪೂರ್ಣಗೊಳಿಸಲು ತಿಳಿಸಿ, ನರೇಗಾ ಕೂಲಿ ಕಾರ್ಮಿಕರ ಇ-ಕೆವೈಸಿಯನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿ, ಮಾನವ ದಿನಗಳು ಸೃಜನೆ ಕಡಿಮೆ ಆಗಿರುವುದರಿಂದ ಹೆಚ್ಚಿನ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡಿ, ಗುರಿಯನ್ನು ಕಡ್ಡಾಯವಾಗಿ ತಲುಪಲು ತಿಳಿಸಿದರು.
ನಂತರ ವಸತಿ ಯೋಜನೆಯ ಕಟ್ಟಡ ಕಾಮಗಾರಿಗಳು ಯಾವ ಹಂತದವರಿಗೆ ಪೂರ್ಣಗೊಂಡಿರುವುದನ್ನು ಸಹ ವೀಕ್ಷಣೆ ಮಾಡಿದರು. ಈ ವೇಳೆ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಯ್ಯಣ್ಣ, ಓಂಕಾರಿ, ತಾತ್ರಿಕ ಸಂಯೋಜಕ ಮೆಹಬೂಬ್, ತಾಂತ್ರಿಕ ಸಹಾಯಕ ಪರ್ವತ ರೆಡ್ಡಿ, ಜಿ.ಕೆ.ಎಮ್, ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು ಇದ್ದರು.


