ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ವರ್ಷ 2 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಜೋಳ ಖರೀದಿಗೆ ನಿಗದಿ ಮಾಡಿತ್ತು. ಈ ವರ್ಷ ಕೇವಲ 88 ಸಾವಿರ ಮೆಟ್ರಿಕ್ ಟನ್ ಜೋಳ ಮಾತ್ರ ಖರೀದಿಸಲು ನಿಗದಿ ಮಾಡಿವೆ. ಈ ರೀತಿ ತೀರ್ಮಾನ ಮಾಡಿದರೆ ರೈತರು ಉದ್ದಾರವಾಗುವುದಾದರೂ ಹೇಗೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.
ಈ ಬಾರಿ ರೈತರು ಬೆಳೆದ ಸಂಪೂರ್ಣ ಜೋಳವನ್ನು ಎಮ್.ಎಸ್.ಪಿ.ದರದಲ್ಲಿ ಖರೀದಿ ಮಾಡಬೇಕು. ಅದು ಆಗಲಿಲ್ಲ ಎಂದರೆ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿಗಳು, ಸ್ವಸಹಾಯ ಸಂಘಗಳು, ರೈತರ ಹೊಲದ ಮೇಲೆ ಸಾಲ ಕೊಟ್ಟಿದ್ದಾರೆ. ಇವರು ಸಹ ಎಮ್.ಎಸ್.ಪಿ.ದರದಲ್ಲಿ ತೆಗೆದುಕೊಂಡು ಹೋಗಿ ಸಾಲಕ್ಕೆ ಹಾಕಿಕೊಳ್ಳಬಹುದು. ಅದೇರೀತಿ ಎರಡನೇ ಬೆಳೆಗೆ ನೀರು ಬಿಡಬೇಕೆಂದು ವಿರೋಧ ಪಕ್ಷದ ಮಾಜಿ ಸಂಸದರು, ಶಾಸಕರು, ಹೋರಾಟವೇನೋ ನಡೆಸಿದ್ದಾರೆ. ಆದರೆ ಹೋರಾಟ ಕೇವಲ ಬರೀ ಓಟಿಗಾಗಿಯೋ, ಅಥವಾ ರೈತರ ಬದುಕಿಗಾಗಿಯೋ ನಮಗೆ ಅರ್ಥವಾಗುತ್ತಿಲ್ಲ.
ಓಟಿಗಾಗಿ ಇವರು ಹೋರಾಟ ನಡೆಸಿದ್ದಾರೆ ಹೊರತು, ರೈತರ ಬದುಕಿಗಾಗಿ ಅಲ್ಲ. ಪ್ರಕೃತಿ ಹೊರ ಕೊಟ್ಟಿದೆ ಡ್ಯಾಮ್ ನಲ್ಲಿ ನೀರಿದೆ ಆದರೂ ನೀರಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಈಗಾಗಲೇ ಮುಂಗಾರು ಬೆಳೆಗಳು ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ಕೂಡ ರೋಗಕ್ಕೆ ತುತ್ತಾಗಿವೆ. ಭತ್ತ ಎಕರೆಗೆ 45 ರಿಂದ 50 ಚೀಲದವರೆಗೆ ಬರುತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಭತ್ತ ದುಂಡಾಣು ರೋಗಕ್ಕೆ ತುತ್ತಾಗಿ ಈಗ ಎಕರೆಗೆ 20 ರಿಂದ 25 ಚೀಲ ಮಾತ್ರ ಬರುತ್ತಿದೆ. ಹೀಗಾದರೆ ರೈತರು ಹೇಗೆ ಬದುಕಬೇಕು.
ಹೀಗಾಗಿ ನ.24 ಕ್ಕೆ ತಹಶೀಲ್ ಕಚೇರಿಗೆ ಮುತ್ತಿಗೆ ಹಾಕುವ ಕೆಲಸವನ್ನು ರೈತ ಸಂಘ ಮುಂದಾಗಿದೆ. ಅಕಸ್ಮಾತ್ ಎರಡನೇ ಬೆಳೆಗೆ ನೀರು ಕೊಡದೇ ಹೋದರೆ, ಕನಿಷ್ಟಪಕ್ಷ ವೈರಸ್ ಬಂದ್ ರೈತರ ಹೊಲಗಳಿಗೆ ಪರಿಹಾರ ಕೊಡುವಂತೆ ಒತ್ತಾಯಿಸಲು ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ ಎಂದರು.
ಈ ವೇಳೆ: ಜಿಲ್ಲಾ ಅಧ್ಯಕ್ಷ ಬಸವರಾಜ ಹಂಚಿನಾಳ, ಗೌರವಾಧ್ಯಕ್ಷ ಅಣ್ಣಪ್ಪ ಜಾಲಿಹಾಳ ಇದ್ದರು.

