ಜಿಲ್ಲಾ ಕನಕ ನೌಕರರ ಸಂಘ, ತಾಲೂಕು ನೌಕರರ ಸಂಘ, ಹಾಗೂ ಕನಕದಾಸ ಶಿಕ್ಷಣ ಸಂಸ್ಥೆ ವತಿಯಿಂದ ನವೆಂಬರ್ 30 ರಂದು ಉಚಿತವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಅರಳಿಮರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆಯುವವರಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ನಗರದ ತುಂಗಭದ್ರಾ ಸಹಕಾರ ಕಟ್ಟಡದಲ್ಲಿ ನವೆಂಬರ್ 30 ರಂದು ಒಂದು ದಿನದ ತರಬೇತಿ ಕಾರ್ಯಾಗಾರ ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ಒಂದು ದಿನದ ಕಾರ್ಯಾಗಾರದಲ್ಲಿ ಇಂಗ್ಲಿಷ್, ಕನ್ನಡ, ಮನೋವಿಜ್ಞಾನ, ಈ ಮೂರು ವಿಷಯಗಳ ಬಗ್ಗೆ ಶರಣಪ್ಪ ಹೊಸಹಳ್ಳಿ, ಯಮನೂರಪ್ಪ ವಟಾರ್, ಮುದುಕಪ್ಪ ಪುರ, ಅವರು ತಿಳಿಸಿ ಕೊಡಲಿದ್ದಾರೆ. ಅಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆ ತನಕ ಉಚಿತ ಕಾರ್ಯಗಾರ ನಡೆಯಲಿದೆ. ಮುಂಜಾನೆ ಮಧ್ಯಾಹ್ನ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 30 ರಂದು ಕನಕ ನೌಕರರ ಸಂಘದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ಉಚಿತ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂದರು.

ಕನಕ ನೌಕರರ ಸಂಘವು ಒಂದೇ ಸಮಾಜಕ್ಕೆ ಸೀಮಿತವಾಗದೆ, ಎಲ್ಲ ವರ್ಗದವರಿಗೂ ಉಪಯೋಗ ಆಗಲಿ ಹಾಗೂ ನಮ್ಮ ಭಾಗದದ ಭಾವಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಲಿ ಎಂಬ ಉದ್ದೇಶದಿಂದ ಕಾರ್ಯಗಾರ ಮಾಡುವುದು ಉತ್ತಮ ಬೆಳವಣಿಗೆ ಕನಕ ನೌಕರರ ಸಂಘ ಹೀಗೆ ಸಮಾಜಮುಖಿ ಕೆಲಸ ಮಾಡಲಿ ಎಂದು ನಿವೃತ್ತ ಶಿಕ್ಷಕರಾದ ಬೀರಪ್ಪ ಶಂಬೋಜಿ ಮಾತನಾಡಿದರು.

ನವೆಂಬರ್ 30 ರಂದು ಕಾರ್ಯಗಾರವನ್ನು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಉದ್ಘಾಟಿಸಲಿದ್ದು, ಸಮಾಜದ ಮುಖಂಡರಾದ ಕೆ.ಕರಿಯಪ್ಪ ಸಮಾಜದ ಗುರುಗಳಾದ ಮಾದಯ್ಯಸ್ವಾಮಿ ಗುರುವಿನ್, ಚಿದಾನಂದಯ್ಯ ಗುರುವಿನ್, ಸೇರಿಂದಂತೆ ಸಮಾಜದ ಮುಖಂಡರು ಬರಲಿದ್ದಾರೆ ಎಂದರು.

ಈ ವೇಳೆ: ಕನಕ ನೌಕರರ ಸಂಘದ ಜಿಲ್ಲಾ ತಾಲೂಕು ಮುಖಂಡರಾದ ಗ್ಯಾನಪ್ಪ ಕನ್ನಂಪೇಟೆ, ಬಸವರಾಜ ಆನೆಗುಂದಿ, ಮೌನೇಶ ಕುರಿ, ಬೀರಪ್ಪ ಹಂಚಿನಾಳ, ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *