ಸಿಂಧನೂರು – ಜ 12 ನಗರದ ಮಸ್ಕಿ ರಸ್ತೆಯಲ್ಲಿರುವ ವಿದ್ಯಾ ಪಬ್ಲಿಕ್ ಸ್ಕೂಲ್ ನ ಎಲ್ಲಾ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕರಾದ ಗೋಪಾಲಕೃಷ್ಣ ಹಾಗೂ ಕಾರ್ಯದರ್ಶಿಗಳಾದ ವೈ. ನರೇಂದ್ರನಾಥ ಇವರುಗಳ ಸೂಚನೆಯ ಮೇರೆಗೆ ಕಾರುಣ್ಯ ಆಶ್ರಮದಲ್ಲಿ ವಿಶೇಷವಾಗಿ ಸಂಸ್ಕಾರ ಸಂಸ್ಕೃತಿಯ ಉಪನ್ಯಾಸ ನೆರವೇರಿತು.ಈ ಸಂದರ್ಭದಲ್ಲಿ ಆಶ್ರಯದಾತರುಗಳಿಗೆ ಚಳಿಗಾಲದ ಉತ್ತಮ ಉಡುಪುಗಳನ್ನು ವಿದ್ಯಾ ಪಬ್ಲಿಕ್ ಸ್ಕೂಲ್ ನಿಂದ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಆಶ್ರಮದ ಎಲ್ಲಾ ಕೋಣೆಗಳನ್ನು ವೀಕ್ಷಿಸಿ ಆಶ್ರಯದಾತರುಗಳಿಗೆ ಆತ್ಮಸ್ಥೈರ್ಯ ತುಂಬಿದರು. ನಂತರ ವಿದ್ಯಾ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷ್ಮಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠವರು ಸಂಸ್ಕೃತಿ ಸಂಸ್ಕಾರದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮೂಲಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷ್ಮಿ ಮಾತನಾಡಿ ನಮ್ಮ ಶಾಲೆಯ ಒಂದರಿಂದ 10ನೆಯ ತರಗತಿಯ ವಿದ್ಯಾರ್ಥಿಗಳು ಈ ಕಾರುಣ್ಯ ಆಶ್ರಮದ ಸೇವೆಯನ್ನು ನೋಡುವುದಲ್ಲದೆ ಸಂಸ್ಕೃತಿ ಉಪನ್ಯಾಸವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ಭಾವುಕರಾದ ರೀತಿ ಮತ್ತು ಸಮಾಜದಲ್ಲಿ ಶಿಕ್ಷಣಕ್ಕಿರುವ ಮಹತ್ವದ ಹಲವಾರು ಅಂಶಗಳನ್ನು ತಿಳಿದುಕೊಂಡು ಆಶ್ರಮದ ವಾಸ್ತವ ಸ್ಥಿತಿಯನ್ನು ನೋಡಿದಾಗ. ವಿದ್ಯಾರ್ಥಿಗಳಿಗಲ್ಲದೆ ಶಿಕ್ಷಕರುಗಳು ಕೂಡ ಬಾವುಕರಾಗಿರುವುದು. ಇಂದಿನ ಕಾರ್ಯಕ್ರಮಕ್ಕೆ ಅರ್ಥ ಸಿಕ್ಕಂತಾಗಿದೆ. ಈ ನಮ್ಮ ಕಾರುಣ್ಯ ಆಶ್ರಮವು ಸಮಾಜಕ್ಕೆ ಸಂಸ್ಕೃತಿ ಸಂಸ್ಕಾರದ ಪಾಠವನ್ನು ಮಾಡುತ್ತಾ ಸಮಾಜ ಏಳಿಗೆಗೆ ಉತ್ತಮ ಸೇವೆ ಒದಗಿಸುತ್ತಿದೆ. ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳ ಬಗ್ಗೆ ಅದೆಷ್ಟೋ ಕನಸುಗಳನ್ನಿಟ್ಟುಕೊಂಡು ಕಷ್ಟದ ಮಧ್ಯೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಾರೆ. ಆದರೆ ಕೊನೆಯ ದಿನಗಳಲ್ಲಿ ಇಂತಹ ವೃದ್ಧಾಶ್ರಮಕ್ಕೆ ಸೇರಿರುವ ಅದೆಷ್ಟೋ ಉದಾಹರಣೆಗಳನ್ನು ಕೂಡ ನಾವು ನೀವೆಲ್ಲರೂ ನೋಡಿದ್ದೇವೆ. ಶಿಕ್ಷಣದ ಮಹತ್ವವನ್ನು ತಿಳಿಸಿರುವ ಕಾರುಣ್ಯ ಆಶ್ರಮದ ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಕೂಡ ನಮ್ಮ ಶಾಲೆಯ ವತಿಯಿಂದ ಧನ್ಯವಾದಗಳು. ಜೀವನದ ಸಂಸ್ಕಾರ ಸಂಸ್ಕತಿಯ ಪಾಠಶಾಲೆಯಾಗಿರುವ ಕಾರುಣ್ಯ ಆಶ್ರಮವು ನೊಂದವರ ನೆಲೆ ಇಲ್ಲದ ತಮಗರಿವಿಲ್ಲದ ಅದೆಷ್ಟೋ ಜೀವಿಗಳಿಗೆ ನೆಲೆಯಾಗಿರುವುದು ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಮತ್ತು ನಮ್ಮೆಲ್ಲಾ ಶಿಕ್ಷಣ ಬಳಗಕ್ಕೆ ತಮ್ಮ ಸೇವೆಯು ನಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾ ಪಬ್ಲಿಕ್ ಸ್ಕೂಲ್ ನ ರಾಜೀವ್.ಕೋ. ಆರ್ಡಿನೇಟರ್. ಶೇಕ್ಷಾವಲಿ ಸಹ ಶಿಕ್ಷಕರು. ಸಂತೋಷ ಸಹ ಶಿಕ್ಷಕರು. ದೀಪಿಕಾ ಸಹಶಿಕ್ಷಕರು. ಇಂದಿರಾ ಸಹಶಿಕ್ಷಕರು. ಮಲ್ಲಿಕಾರ್ಜುನ ಸಹಶಿಕ್ಷಕರು. ಸ್ವಾತಿ ಸಹಶಿಕ್ಷಕರು. ಶಿವಾನಿ ಸಹಶಿಕ್ಷಕರು. ಮುತ್ತಣ್ಣ ಸಹಶಿಕ್ಷಕರು. ಸಿದ್ದಯ್ಯ ಸಹ ಶಿಕ್ಷಕರು. ಕು. ವೀಣಾ ಸಹ ಶಿಕ್ಷಕರು. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ.ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಹಾಗೂ ವಿದ್ಯಾ ಪಬ್ಲಿಕ್ ಸ್ಕೂಲ್ ನ ವಾಹನಗಳ ಚಾಲಕರು ಮತ್ತು ಎಲ್ಲಾ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *