ಕೆಪಿಸಿಸಿ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಜ.19 ರಂದು ರಾಗಲಪರ್ವಿ, ರಾಮತ್ನಾಳ, ಹೆಡಗಿನಾಳ, ಗ್ರಾಮಗಳಲ್ಲಿ ಮೊದಲ ದಿನ ಉದ್ಘಾಟಿಸಿಲಾಗುತ್ತಿದೆ. ನಂತರ ಉಪವಾಸ ಸತ್ಯಾಗ್ರಹ 5 ಕಿ.ಮೀ.ದಿಂದ 10 ಕಿ.ಮೀ.ವರೆಗೂ ಪಾದಯಾತ್ರೆ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ಧಡೇಸೂಗೂರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮನರೇಗಾ ಯೋಜನೆ ಬಡವರ, ಶ್ರಮಿಕರ, ಕೂಲಿಗಳ ದುಡಿಯುವ ಕೈಗಳನ್ನು ಕಟ್ಟಿಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ.
ನರೇಗಾ ಯೋಜನೆಯಲ್ಲಿನ ನಿಯಮಗಳನ್ನು ಬದಾಲಾಯಿಸಿದ್ದನ್ನು ವಿರೋಧಿಸಿ ಜ.19 ರಿಂದ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಲಿ ಶಾಸಕರು ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಭಾಗವಹಿಸಬೇಕು.
ಮಹಾತ್ಮಾಗಾಂಧಿ ಹೆಸರನ್ನು ಬದಲಾವಣೆ ಮಾಡಿ ವಿಜಿ ರಾಮಜಿ ಎಂದು ಹೆಸರಿಡಲು ಮುಂದಾಗಿದ್ದು, ಮತ್ತು ತಾಲೂಕಿನ ಕೇಂದ್ರ ಸರ್ಕಾರ ಸೂಚಿಸಿದ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಕೆಲಸ ಮಾಡಲಾಗುತ್ತಿದೆ. 60 ದಿನಕ್ಕೆ ಕೆಲಸವನ್ನು ನಿಗದಿಗೊಳಿಸಿ ಗುತ್ತಿಗೆದಾರರ
ಮೂಲಕ ಕೆಲಸವನ್ನು ಮಾಡಿಸುವ ಹುನ್ನಾರ ನಡೆದಿದೆ.
ಇದರ ಕುರಿತು ಪ್ರತಿಭಟಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.
ಈ ವೇಳೆ: ಮುಖಂಡರಾದ ಎನ್.ಅಮರೇಶ, ಅಶೋಕ ಉಮಲೂಟಿ, ಖಾಜಿ ಮಲ್ಲಿಕ್, ಹನುಮೇಶ ನಾಯಕ, ಬಿ.ಎಚ್.ನಾಯಕ ಇದ್ದರು.

