ಸಿಂಧನೂರು — ಲಿಂಗಸೂಗೂರು ಪಟ್ಟಣದ ಐ.ಎಂ.ಎ. ಹಾಲ್ ನಲ್ಲಿ ಕಾರುಣ್ಯ ನೆರೆ ವೃದ್ಧಾಶ್ರಮ ಸಿಂಧನೂರು ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆಲವು ದಿನಗಳ ಹಿಂದೆ ಅಮೆರಿಕನ್ ವಿಜಡಮ್ ಯೂನಿವರ್ಸಿಟಿಯಿಂದ “ಗೌರವ ಡಾಕ್ಟರೇಟ್ ” ಸ್ವೀಕರಿಸಿದ್ದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರಿಗೆ ಅಭಿನಂದನಾ ಸಮಾರಂಭ ” ಚಿಂತನೆಗಳ ಸಂಗ್ರಹ” ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಸಂಗೀತ ಸಾಂಸ್ಕೃತಿಗೆ ಕಾರ್ಯಕ್ರಮಗಳ ಕಾರ್ಯಕ್ರಮವು ವಿವಿಧ ಮಠಾಧೀಶರ ಗಣ್ಯಾತಿಗಣ್ಯರ ಮತ್ತು ಹಲವಾರು ಸಾಧಕರ ಸಮಾಗಮದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಹರ ಗುರು ಚರ ಮೂರ್ತಿಗಳು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಗುರುಗುಂಟಾ ಸುಕ್ಷೇತ್ರದ ಶ್ರೀ ಅಮರೇಶ್ವರ ಗುರು ಶ್ರೀ ಷ.ಬ್ರ. ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ಇಂದಿನ ಈ ಕಾರ್ಯಕ್ರಮದಲ್ಲಿ ಅಂಗವಿಕಲರಾದ ಮಲ್ಲಿಕಾರ್ಜುನ ಸ್ವಾಮಿಯವರು ಸಿಂಧನೂರಿನ ಕಾರುಣ್ಯ ಆಶ್ರಮದ ಸದಸ್ಯರಾಗಿ ಮತ್ತು ನಮ್ಮ ಲಿಂಗಸೂಗೂರು ಭಾಗದಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಾಡಿನ ಎಲ್ಲಾ ಹರ-ಗುರು ಚರಮೂರ್ತಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಹುಟ್ಟು ಅಂಗವಿಕಲರಾದ ಇವರು ಮಾಡುತ್ತಿರುವ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ನಮ್ಮ ಸಿಂಧನೂರಿನ ಕಾರುಣ್ಯಾಶ್ರಮವು ಅನಾಥಾಶ್ರಮ ನಡೆಸುವುದಲ್ಲದೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಕ್ಕಳಾದವರು ಹೆತ್ತವರನ್ನು ನೋಡಿಕೊಳ್ಳಲೇಬೇಕು ಎನ್ನು ಹಲವಾರು ಅಭಿಯಾನಗಳನ್ನು ಜಾಗೃತಿಗಳನ್ನು ಮಾಡಿ ಮಾಡುತ್ತಿರುವ ಕಾರುಣ್ಯಾಶ್ರಮದ ಸೇವೆ ಶ್ಲಾಘನೀಯ. ಈ ಭಾಗದಲ್ಲಿ ಸುಮಾರು ವರ್ಷಗಳಿಂದ ಹಲವಾರು ಸಮಾಜ ಸೇವಕರುಗಳಿಗೆ ಕಾರುಣ್ಯ ಕುಟುಂಬವು ಸ್ಫೂರ್ತಿಯಾಗಿದೆ.ಮಾನವೀಯ ಮೌಲ್ಯಗಳನ್ನು ಉಳಿಸುವ ಕೆಲಸ ಕಾರುಣ್ಯಾಶ್ರಮವು ಮಾಡುತ್ತಿರುವುದು ನಮ್ಮೆಲ್ಲರಿಗೆ ಸಂತೋಷವೆನಿಸಿದೆ. ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರು ಕೂಡ ಸಹಾಯ ಸಹಕಾರ ಮಾಡಿದರೆ ಸಮಾಜಕ್ಕೆ ಇನ್ನೂ ಸೇವೆ ದೊರೆಯಲಿದೆ. ನಾನು ನನ್ನದು ಎನ್ನುವ ಭಾರತದ ಈ ಜಗತ್ತಿನಲ್ಲಿ ನಿಸ್ವಾರ್ಥತೆಯ ಪಯಣದಲ್ಲಿ ಸಾಗುತ್ತಿರುವ ಕಾರುಣ್ಯ ಆಶ್ರಮಕ್ಕೆ ನಾಡಿನ ಎಲ್ಲಾ ಹರ-ಗುರು ಚರಮೂರ್ತಿಗಳ ಶುಭಾಶಿರ್ವಾದವಿರುತ್ತದೆ. ನಮ್ಮ ಮಲ್ಲಿಕಾರ್ಜುನ ಸ್ವಾಮಿ ಕರಡಕಲ್ ಅವರಿಗೆ ಇಂದಿನ ಈ ಸಮಾರಂಭದಲ್ಲಿ ಹಲವಾರು ವಿವಿಧ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳು ಶಿಷ್ಯರು ಅಭಿನಂದಿಸುತ್ತಿರುವುದು ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿನ ವಿಶೇಷ ಸಾಧಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಆಶೀರ್ವಚನ ನೀಡಿದರು. ನಂತರ ಸಿಂಧನೂರು ತಾಲೂಕಿನ ಸಿದ್ದಾಶ್ರಮದ ಡಾ. ಸಿದ್ದರಾಮೇಶ್ವರ ಶರಣರು ಉಮಾದೇವಿ ಮಡಿವಾಳಯ್ಯ ಹಿರೇಮಠ ಈ ಆದರ್ಶ ದಂಪತಿಗಳ ಮಗನಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಅವರು ವಿಶೇಷ ಚೇತನರಾಗಿದ್ದರು ಕೂಡ ಸಮಾಜದ ಬಗ್ಗೆ ಕಳಕಳಿಯನ್ನು ಹೊಂದಿ ಸಮಾಜಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿರುವುದು ಕಾರುಣ್ಯ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿ ಕೊಟ್ಟಿದ್ದಾರೆ. ಕರುಣೆಯ ಕಾರುಣ್ಯ ಮೂರ್ತಿಗಳಾಗಿ ನೊಂದವರಿಗೆ ನಾಡಿಮಿಡಿತವಾಗಿ ಅನಾಥ ಜೀವಿಗಳ ಮಧ್ಯೆ ಬದುಕು ಕಟ್ಟಿ ಕೊಂಡಿರುವ ಇವರಿಗೆ ನಮ್ಮ ಆಶೀರ್ವಾದವಿರುತ್ತದೆ ಮತ್ತು ಇವರ ಮಾತೋಶ್ರೀ ಅವರಿಗೆ ನಮ್ಮ ಆಶ್ರಮದ ವತಿಯಿಂದ ಧನ್ಯವಾದಗಳು.ಇಂದು ಪ್ರಶಸ್ತಿ ಸ್ವೀಕಾರ ಮಾಡುವಂತ ಪ್ರತಿಯೊಬ್ಬ ಸಾಧಕರು ಕೂಡ ಸಮಾಜದ ಬಹುದೊಡ್ಡ ಆಸ್ತಿಯಾಗಿ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರ ಪರಂಪರೆ ಇತಿಹಾಸವನ್ನು ಉಳಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸೇವೆ ತಮ್ಮ ಮೂಲಕ ಸಮಾಜಕ್ಕೆ ದೊರೆಯಲಿ ಎನ್ನುವುದು ನಮ್ಮ ಆಶಯ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮವನ್ನು ಸಂಗೀತ ನಾಡಗೌಡ ಮುದ್ದೇಬಿಹಾ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಮುಖಂಡರು ಉದ್ಘಾಟಿಸಿದರು. ವೇ.ಮೂ.ವೀರೇಶ ಯಡಿಯೂರು ಮಠ ಶ್ರೀ ಶಾಂಭವಿ ಪುಣ್ಯಾಶ್ರಮ ಸಿಂಧನೂರು ವೇ.ಮೂ. ಡಾ. ಕಾಡಯ್ಯ ಹಿರೇಮಠ ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ಕಾಳಿಕಾ ದೇವಿ ಆರಾಧಕರು ದಿಗ್ಗೆವಾಡಿ ಬೆಳಗಾವಿ ಇವರುಗಳು ಸಾನಿಧ್ಯ ವಹಿಸಿದ್ದರು. ಶ್ರೀ ಮತಿ ಉಮಾದೇವಿ ಹಿರೇಮಠ ಸಂಸ್ಥಾಪಕರು ಸ್ವಾಮಿ ಚಾರಿಟಬಲ್ ಟ್ರಸ್ಟ್ ಹಾಗೂ ವೇ.ಮೂ. ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು. ಸಂಸ್ಥಾಪಕರು ಕಾರುಣ್ಯ ನೆಲೆ ವೃದ್ಧಾಶ್ರಮ ಸಿಂಧನೂರು ಇವರುಗಳು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಡವಿ ಸ್ವಾಮಿ ಹಿರೇಮಠ ಬಳ್ಳಾರಿ ರಾಜ್ಯ ಕಾರ್ಯದರ್ಶಿಗಳು ಬಿಜೆಪಿ ಯುವ ಮೋರ್ಚಾ. ಭೂಪನಗೌಡ ಪಾಟೀಲ್ ಅಧ್ಯಕ್ಷರು ನಗರಾಭಿವೃದ್ಧಿ ಲಿಂಗಸೂಗೂರು. ಗಿರಿ ಮಲ್ಲನಗೌಡ ಮಾಲಿಪಾಟೀಲ್ ಬಿಜೆಪಿ ಮುಖಂಡರು ಕರಡಕಲ್.ಮಾರುತಿ ಎಮ್ ವಜ್ಜಲ್ ಬಿಜೆಪಿ ಯುವ ಮುಖಂಡರು ಲಿಂಗಸೂಗೂರು. ಬಸವರಾಜ ನಾಯಕ ವಾಲ್ಮೀಕಿ ಸಮಾಜದ ಮುಖಂಡರು ಗುರುಗುಂಟಾ. ವೀರನಗೌಡ ಬಾದರ್ಲಿ ಪ್ರಗತಿಪರ ಕೃಷಿ ಚಿಂತಕರು ಸಿಂಧನೂರು. ಡಾ.ನಾಗವೇಣಿ.ಎಸ್. ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ. ಡಾ. ಸಿ.ಬಿ. ವಿರಕ್ತ ಮಠ ಆಯುಷ್ ಆರೋಗ್ಯಾಧಿಕಾರಿಗಳು ಸಿ. ಎಚ್. ಸಿ. ನಾಲತವಾಡ. ಹಾಗೂ ಕಾರುಣ್ಯ ಆಶ್ರಮದ ಪದಾಧಿಕಾರಿಗಳಾದ ಕರಿಬಸಯ್ಯ ಸ್ವಾಮಿ ಉಪಾಧ್ಯಕ್ಷರು. ಕೆ.ಸಂಗನಗೌಡ ಖಜಾಂಚಿಗಳು. ಕ. ಚಿದಾನಂದಪ್ಪ ಗೌಡ ಕಾರ್ಯದರ್ಶಿಗಳು. ಕೆ.ಶರಣಪ್ಪ ಸದಸ್ಯರು ಮಂಜುನಾಥ ಮಾಲಿ ಪಾಟೀಲ್ ಸದಸ್ಯರು. ಸುಜಾತ ಹಿರೇಮಠ ಸದಸ್ಯರು. ಉಪಸ್ಥಿತಿ ವಹಿಸಿದ್ದರು. ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಪ್ರಾಸ್ತಾವಕವಾಗಿ ಮಾತನಾಡಿದರು. ಅಣ್ಣಪ್ಪಗೌಡ ಮೇಟಿ ಗೌಡ್ರು ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಗಾಣಿಗರ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸಾಧಕರುಗಳು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಅನೇಕ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

