ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಮನೆಗೊಂದು ಗ್ರಂಥಾಲಯ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ನಿರ್ಮಿಸುವ ಗುರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಹೊಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅಭಿಪ್ರಾಯ ಪಟ್ಟರು.

ಸಿಂಧನೂರಿನ ಸಾಹಿತಿ ಶಂಕರ ದೇವರು ಹಿರೇಮಠ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಅಡಿಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಂಕರ ದೇವರು ಹಿರೇಮಠ ಉತ್ತಮವಾದ ಅಮೂಲ್ಯವಾದ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಓದುವ ಅಭಿವೃದ್ಧಿ ಒಂದೇ ಸಾಹಿತ್ಯ ರಚನೆಯಲ್ಲಿ ತಮ್ಮ ಪ್ರೌಢಮೆಯನ್ನು ಹೊಂದಿದ್ದಾರೆ. ಇವರ ಮನೆಯಲ್ಲಿ ಗ್ರಂಥಾಲಯ ಅಪರೂಪದ ಪುಸ್ತಕಗಳನ್ನು ಒಳಗೊಂಡಿವೆ.

ನಾವು ಮನೆಕಟ್ಟಿ ವಾಸಿಸುವಾಗ ಅಲ್ಲೊಂದು ಪೂಜೆ ಮನೆ ಇರಬೇಕು ಅದು ನಮಗೆ ನೆಮ್ಮದಿಯ ತಾಣ ಎಂದು ನಾವು ಭಾವಿಸುತ್ತೇವೆ. ಅದೇ ರೀತಿಯಲ್ಲಿ
ಪ್ರತಿಮನೆಯಲ್ಲೂ ಸಹ ಒಂದು ಪುಟ್ಟ ಗ್ರಂಥಾಲಯ ಇರಬೇಕು. ಗ್ರಂಥಾಲಯ ಎಂದರೆ ಅದೊಂದು ಕೇವಲ ಪುಸ್ತಕಗಳ ಮಳೆಗೆಯಲ್ಲ. ಗ್ರಂಥಾಲಯವು ದೇಹದ ಆತ್ಮದಂತೆ ನಮ್ಮ ಮನೆ ಎಂಬ ದೇವಾಲಯದ ಜ್ಞಾನ ಸಂಸ್ಕೃತಿಯ ಕಳಸ. ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯಗಳನ್ನು ನಾವು ನಿರ್ಮಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ: ಸಾಹಿತಿಗಳಾದ ಶಂಕರ ದೇವರು ಹಿರೇಮಠ, ಕರಿಬಸಯ್ಯಸ್ವಾಮಿ ಹಿರೇಮಠ, ಭಾರತಿ ತಿವಾರಿ, ಸಾವಿತ್ರಿ ದೀಕ್ಷಿತ್, ಮೌಲಪ್ಪ ಮಾಡಸಿರವಾರ, ಪಂಪಯ್ಯಸ್ವಾಮಿ ಸಾಲಿಮಠ, ಜಿಲ್ಲಾ ಪ್ರತಿನಿಧಿಗಳಾದ ಗುಂಡೂರಾವ್ ದೇಸಾಯಿ, ವೆಂಕನಗೌಡ ವಟಗಲ್, ರಾಜಶೇಖರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *