ಲಕ್ಷ್ಮೇಶ್ವರ: ಗೋವಿನಜೋಳ ಖರೀದಿ ಕೇಂದ್ರ
ಬೆಳೆ ಹಾನಿ ಬೆಳೆ ವಿಮೆ ಪರಿಹಾರ ಬೇಡಿಕೆ ಈಡೇರಿಸುವಂತೆ ರೈತಪರ ಸಂಘಟನೆಗಳ ಮುಖಂಡರು ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸೋಮವಾರ 3 ನೇಯ ದಿನ ತಲುಪಿದ್ದು ಧರಣಿ ಸ್ಥಳಕ್ಕೆ
ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಭೇಟಿ ನೀಡಿ ಧರಣಿ ಕುಳಿತ ರೈತರಿಗೆ ಬೆಂಬಲ ಸೂಚಿಸಿದರು
ಈ ಸಮಯದಲ್ಲಿ ಮಾತನಾಡಿದ ಶ್ರೀಗಳು
ಇಡಿ ನಾಡಿಗೆ ಅನ್ನ ನೀಡುವ ಅನ್ನದಾತರು ತಾವು ಬೆಳೆದ ಬೆಳೆಗೆ ಸರ್ಕಾರವೇ ನಿಗದಿಪಡಿಸಿದ ಬೆಲೆಗೆ ಖರೀದಿ ಕೇಂದ್ರವನ್ನು
ಬೇಗನೆ ತೆರೆದು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು
ಧರಣಿ ನಿರಂತ ರೈತರು ನಡೆಸುತ್ತಿರುವ ಸತ್ಯಾಗ್ರಹ 3,ನೇಯ ದಿನಕ್ಕೆ ಕಾಲಿಟ್ಟಿದ್ದು
ಇಲ್ಲಿಯವರೆಗೂ ರೈತರ ಬೇಡಿಕೆ ಈಡೇಯರದ ಕಾರಣ ಸರ್ಕಾರಕ್ಕೆ ರೈತರ ಬೇಡಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಕರುಣಿಸಲಿ ಎಂದು
ರೈತ ಮುಖಂಡರಿಂದ ವಿಶೇಷ ಹೋಮ ಪೂಜೆ ನೆರವೇರಿಸಿ ಪಟ್ಟಣದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ ರೈತ ಮುಖಂಡರು ಇನ್ನಾದರೂ ಆಡಳಿತ ನಡೆಸುತ್ತಿರುವ ಸರಕಾರಗಳು ರೈತರ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು
