ತಾಳಿಕೋಟಿ: ತಾಲೂಕಿನ ಶಿವಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹಿರಿಯ ಮುಖ್ಯಗುರು ಮಾತೆಯಾಗಿ ನೇಮಕಗೊಂಡಿರುವ ಆರ್ ಬಿ ಆಲೂರ ಇವರಿಗೆ ದಲಿತ ಸಂಘಟನೆಗಳ ಮುಖಂಡರು ಶುಕ್ರವಾರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗಡಿನಾಡು ಜೈ ಭೀಮ ವೇದಿಕೆ ರಾಜ್ಯ ಉಪಾಧ್ಯಕ್ಷ ಅಶೋಕ ಚಲವಾದಿ ಅವರು ಮಾತನಾಡಿ ತಾಳಿಕೋಟಿ ಎಂ ಪಿ ಎಸ್ ನಲ್ಲಿ ಮುಖ್ಯ ಗುರುಮಾತೆಯಾಗಿ ಕ್ರಿಯಾಶೀಲತೆಯೊಂದಿಗೆ ಸೇವೆಯನ್ನು ಸಲ್ಲಿಸಿ ಇಲಾಖೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟ ಅನುಭವಿ ಶಿಕ್ಷಕಿ ಸಹೋದರಿ ಆಲೂರ ಅವರು ಈ ಶಾಲೆಗೆ ವರ್ಗಾವಣೆಗೊಂಡು ಬಂದಿರುವುದು ಸಂತಸದ ವಿಷಯ ಅವರ ಸೇವಾ ಅವಧಿಯಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಗುರುಮಾತೆ ಆಲೂರ ಅವರು ಈ ನಿಮ್ಮ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ನಾನು ಇಲ್ಲಿ ಸೇವೆಯಲ್ಲಿ ಇರುವವರೆಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಇದಕ್ಕೆ ನನ್ನ ಸಹೋದ್ಯೋಗಿಗಳೊಂದಿಗೆ ನಿಮ್ಮ ಹಾಗೂ ಗ್ರಾಮದ ಎಲ್ಲ ಜನರ ಸಹಕಾರ ನನಗೆ ಬೇಕು ಎಂದರು. ಈ ಸಮಯದಲ್ಲಿ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ವಾಲಿಕಾರ, ದಲಿತ ಮುಖಂಡರಾದ ಜುಮ್ಮಪ್ಪ ಗುಂಡುಕನಾಳ, ಹುಸೇನಪ್ಪ ಮೂಕಿಹಾಳ, ರಾಜು ಅಲ್ಲಪೂರ, ಮಂಜುನಾಥ ಪೂಜಾರಿ, ಡೂಗಪ್ಪ ಚಲವಾದಿ, ರವಿರಾಜ ಬಾಗೇವಾಡಿ,ಅಪ್ಪು ತಳವಾರ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *