ಸಿರವಾರ, ಲೋಕಾಯುಕ್ತ ಅಧಿಕಾರಿಗಳು ಬುಧವಾರ ಸಂಜೆ ಸಿರವಾರ ಪಟ್ಟಣ ಪಂಚಾಯತಿಗೆ ದಿಢೀರ್ ಭೇಟಿ ನೀಡಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಒದಗಿಸುತ್ತಿರುವ ಸರ್ಕಾರಿ ಸೇವೆಗಳು, ಎ-ಖಾತಾ, ಬಿ-ಖಾತಾ ವಿತರಣೆ, ಪೌರಾಕಾರ್ಮಿಕರ ಸೇವೆ, ಸಕಾಲದಲ್ಲಿ ಅರ್ಜಿಗಳ ವಿಲೇವಾರಿ, ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ವಾಹನಗಳ ನಿರ್ವಹಣೆ, ಶೌಚಾಲಯ, ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರೆ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಗೆ ಉಚಿತವಾಗಿ ಸೇವೆಗಳನ್ನು ಒದಗಿಸುವುದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ಲಂಚ ಕೇಳುವುದು, ಹಣಕ್ಕೆ ಬೇಡಿಕೆ ಇಡುವ ವಿಷಯಕ್ಕೆ ಸಂಬಂಧಿಸಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೊಬೈಲ್ ಫೋನ್’ಗಳನ್ನು ಪರಿಶೀಲನೆ ಮಾಡಿದ್ದಾರೆ.
ದಾಖಲೆಗಳ ಪರಿಶೀಲನೆ ವೇಳೆ ಏನೇ ಲೋಪದೋಷಗಳು ಕಂಡು ಬಂದರೇ ಅಂಥಹ ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರಿನ ಕೇಂದ್ರ ಕಚೇರಿಗೆ ಸಲ್ಲಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ಬೆಳಗಾವಿ, ಪಿಐ ರಾಜಶೇಖರಯ್ಯ ಬೆಂಗಳೂರು,
ಪ್ರಕಾಶ್, ನಾಗಣ್ಣ ಪೂಜಾರಿ, ಶಂಕರ್ ಹಾಗೂ ಪ.ಪಂ.ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಸಮುದಾಯ ಸಂಘಟನಾ ಅಧಿಕಾರಿ ಹಂಪಯ್ಯ ಪಾಟೀಲ್, ಜೆಐ ಸೈಯದ್ ಮೊಹಮ್ಮದ್ ಹಸನ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

