ಕವಿತಾಳ : ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಕವಿತಾಳ ಪಟ್ಟಣದ ಬಿ ಫ್ರೇಶ್ ಫ್ಯಾಕ್ಟರಿಗೆ ಶೈಕ್ಷಣಿಕ ಬೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಫ್ಯಾಕ್ಟರಿಯ ಇತಿಹಾಸ, ಉದ್ದೇಶ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಇದರ ಪಾತ್ರದ ಕುರಿತು ಮಾಹಿತಿ ನೀಡಲಾಯಿತು.
ಕಚ್ಚಾ ವಸ್ತುಗಳ ಸ್ವೀಕಾರದಿಂದ ಆರಂಭಿಸಿ, ಶುದ್ಧೀಕರಣ, ಸಂಸ್ಕರಣೆ, ಯಂತ್ರೋಪಕರಣಗಳ ಸಹಾಯದಿಂದ ಉತ್ಪಾದನೆ, ಗುಣಮಟ್ಟ ಪರಿಶೀಲನೆ, ಪ್ಯಾಕಿಂಗ್ ಮತ್ತು ಮಾರುಕಟ್ಟೆಗೆ ರವಾನೆಯವರೆಗೆ ನಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಮಕ್ಕಳು ನೇರವಾಗಿ ವೀಕ್ಷಿಸಿದರು. ಜೊತೆಗೆ, ಪರಿಸರ ಸಂರಕ್ಷಣೆ, ವ್ಯರ್ಥ ವಸ್ತುಗಳ ನಿರ್ವಹಣೆ ಹಾಗೂ ಸುರಕ್ಷತಾ ನಿಯಮಗಳ ಪಾಲನೆಯ ಬಗ್ಗೆ ಸಹ ವಿವರಿಸಲಾಯಿತು.
ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. ಈ ಶೈಕ್ಷಣಿಕ ಬೇಟಿಯಿಂದ ಮಕ್ಕಳಲ್ಲಿ ಕೈಗಾರಿಕಾ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಿದ್ದು, ಪಾಠ್ಯಜ್ಞಾನದ ಜೊತೆಗೆ ಜೀವನೋಪಯೋಗಿ ತಿಳುವಳಿಕೆ ಪಡೆಯಲು ನೆರವಾಯಿತು. ಶಾಲೆಯ ಶಿಕ್ಷಕರು ಇಂತಹ ಅನುಭವಾಧಾರಿತ ಕಲಿಕೆ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬಹಳ ಸಹಾಯಕವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಡಲ್ ಹಿರಿಯ ಪ್ರಾಥಮಿಕ ಶಾಲೆಯ, ಮುಖ್ಯೋಪಾಧ್ಯಾಯರು , ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *