ಮಾನ್ವಿ : ತಾಲೂಕಿನ ಉಟಕನೂರು ಗ್ರಾಮದಲ್ಲಿ ಉಟಕನೂರು ಶ್ರೀ ಆಡವಿಸಿದ್ದೇಶ್ವರ ಸುಕ್ಷೇತ್ರದ ಶ್ರೀ ಮರೀಬಸವಲಿಂಗ ದೇಸಿಕೇಂದ್ರ ಶಿವಯೋಗಿಗಳ ಜಾತ್ರಮಹೋತ್ಸವದ ಅಂಗವಾಗಿ ಉಟಕನೂರು ಗ್ರಾಮ ಪಂಚಾಯಿತಿ ವತಿಯಿಂದ ಉಟಕನೂರು ಗ್ರಾಮದಲ್ಲಿ ಚರಂಡಿಗಳ ಸ್ವಚ್ಚತೆ, ಹಾಗೂ ಬೀದಿ ದೀಪಗಳ ದುರಸ್ತಿ ಸೇರಿದಂತೆ ಗ್ರಾಮದಲ್ಲಿ ಸ್ವಚ್ಚತೆ ಕೈಗೋಳಲಾಯಿತು.
ಗ್ರಾ,ಪಂ. ಅಭಿವೃದ್ದಿಆಧಿಕಾರಿ ಜುಬೇರನಾಯಕ್ ಮಾತನಾಡಿ ಗ್ರಾಮದಲ್ಲಿನ ಚರಂಡಿಗಳಲ್ಲಿ ನಿಂತಿರುವ ನೀರಿನಿಂದಾಗಿ ಮಲೇರಿಯಾ,ಡೆಂಗ್ಯೂ,ಚಿಕನ್ ಗೂನ್ಯ, ಸೇರಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹರಡದಂತೆ ಇಂದು ಚರಂಡಿಗಳನ್ನು ಸ್ವಚ್ಚಗೊಳಿಸಿ ಬ್ಲಿಚಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

