ಮುದಗಲ್ : ತೊಂಡಿಹಾಳ ಗ್ರಾಮದ ಗ್ರಾಮದೇವತೆ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಲಿಂಗಸುಗೂರು ತಹಸೀಲ್ದಾರ್ ಸತ್ಯಮ್ಮ ಹೇಳಿದರು.
ತೊಂಡಿಹಾಳ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ತಾಲೂಕು ಆಡಳಿತ ಹಾಗೂ ಲಿಂಗಸುಗೂರು ಪೊಲೀಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.
ಜ.16 ರಿಂದ 18ರವರೆಗೆ ಜಾತ್ರೆ ನಡೆಯಲಿದೆ. ದೇವಿ ಹೆಸರಲ್ಲಿ ಪ್ರಾಣಿಬಲಿ, ದೇವದಾಸಿ ಪದ್ಧತಿ, ಅರೆಬೆತ್ತಲೆ ಉರುಳು ಸೇವೆಯಂತಹ ಅನಿಷ್ಟ ಪದ್ಧತಿಗಳನ್ನು ಆಚರಣೆ ಮಾಡುವಂತಿಲ್ಲ. ಧಾರ್ಮಿಕ ಕ್ರಾರ್ಯಕ್ರಮದ ಮೂಲಕ ಜಾತ್ರೆ ನಡೆಸಬೇಕು ಎಂದರು.

ಭಕ್ತರಿಗೆ ಕುಡಿವ ನೀರು, ವಿದ್ಯುತ್ ದೀಪ, ರಸ್ತೆ, ಸಾರಿಗೆ ಸೌಕರ್ಯ ಸೇರಿದಂತೆ ಯಾವುದೇ ತೊಂದರೆ ಆಗದಂತೆ ಜಾಗೃತಿ ವಹಿಸಲು ಕಂದಾಯ ಇಲಾಖೆ ಹಾಗೂ ಹಲಕಾವಟಗಿ ಗ್ರಾಪಂಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಿಡಿಪಿಒ ನಾಗರತ್ನಾ, ಟಿಎಚ್‌ಒ ಅಮರೇಶ ಪಾಟೀಲ್, ಅಗ್ನಿಶಾಮಕದಳ ಅಧಿಕಾರಿ ಹೊನ್ನಪ್ಪ, ಮುದಗಲ್ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ, ಉಪತಹಸೀಲ್ದಾರ್ ತುಳುಜಾರಾಮ್ ಸಿಂಗ್, ಕಂದಾಯ ನಿರೀಕ್ಷಕ ಶಂಕ್ರಪ್ಪ, ಗ್ರಾಮಲೆಕ್ಕಾಧಿಕಾರಿ ಇಮಾಮಸಾಬ್, ಹಲ್ಕಾವಟಗಿ ಗ್ರಾಪಂ ಪಿಡಿಒ ಶಶಿಕಲಾ ಪಾಟೀಲ್, ಪ್ರಮುಖರಾದ ಬೈಲಪ್ಪ, ಬಸಪ್ಪ ಕುರಿ, ಲಕ್ಜಪ್ಪ, ಪರಶುರಾಮ, ಹನಮಂತ, ಸಂಗಮೇಶ ಇತರರಿದ್ದರು. ”
ಮೂಢನಂಬಿಕೆಯನ್ನು ಜನರು ನಂಬಬಾರದು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕಾಡಳಿತ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಸೂಚಿಸಲಾಗಿದೆ. ಭಕ್ತರು ಕೂಡ ಸಹಕಾರ ನೀಡಬೇಕು.

Leave a Reply

Your email address will not be published. Required fields are marked *