ಅಣ್ಣ ಬಸವಣ್ಣನವರ ತತ್ವದಂತೆ ತಮ್ಮ ಜೀವನ ಉದ್ದಕ್ಕೂ ಬದಕು ನಡೆಸಿದ್ದ ಲಿಂ. ಚನ್ನಬಸವ ಶ್ರೀಗಳು ಪ್ರತಿಯೊಬ್ಬರ ಹೃದಯದಲ್ಲಿ ಜೀವಿಸಿದ್ದಾರೆ ಎಂದು ಲೋಟಗೇರಿಯ ಗುರುಮೂರ್ತಿ ಶ್ರೀಗಳು ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಇಂಗಳೇಶ್ವರ ವಿರಕ್ತಮಠದ ವಚನ ಶಿಲಾಮಂಟಪದ ನಿರ್ಮಾಣದ ರೂವಾರಿ ಚನ್ನಬಸವ ಶ್ರೀಗಳ ನುಡಿ-ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ತತ್ವಗಳ ಬಗ್ಗೆ ಹೇಳುವುದು ಸುಲಭವಾದರೆ ಅವರಂತೆ ಬದಕು ನಡೆಸುವುದು ಕಷ್ಟದ ಕೆಲಸವಾಗಿದೆ. ಆದರೆ, ಚನ್ನಬಸವ ಶ್ರೀಗಳು ಅದರಂತೆ ನಡೆದುಕೊಂಡಿದ್ದಾರೆ ಎಂದರು.ಇಂಗಳೇಶ್ವರ ವಿರಕ್ತಮಠದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಈ ಭೂಮಿ ಮೇಲೆ ಸೂರ್ಯ-ಚಂದ್ರರು ಇರುವವರಿಗೂ ಬಸವಾದಿ ಶರಣರ ವಚನಗಳು ಉಳಿಯುವಂತ ಕಾರ್ಯ ಚನ್ನಬಸವ ಶ್ರೀಗಳು ಮಾಡಿದ್ದಾರೆ.
ಮಸಬಿನಾಳ ವಿರಕ್ತಮಠದ ಸಿದ್ಧರಾಮ ಶ್ರೀಗಳು, ವಿರಕ್ತರಮಠದ ಸಿದ್ಧಲಿಂಗ ಶ್ರೀಗಳು, ಚಡಚಣ ಶ್ರೀಗಳು, ಪಡೇಕನೂರ ಶ್ರೀಗಳು ಮಾತನಾಡಿದರು.
ಡೋಣೂರ ಗ್ರಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಬಸವನಬಾಗೇವಾಡಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಅಶೋಕ ಗೌಡ ಪಾಟೀಲ, ರಾಜು ಅಕ್ಕಾಗೋಳ, ಧೂಳಪ್ಪ ಮಂಗನವರ, ಅವ್ವಣ್ಣ ಅಕ್ಕಾಗೋಳ, ಶರಣು ಭಾವಿಕಟ್ಟಿ, ಪವನ ಅಕ್ಕಗೋಳ, ಶ್ರೀಶೈಲ ಮದರಕಿ, ಬಸವರಾಜ ಡೋಮನಾಳ, ಶೇಖಪ್ಪ ಶಿರಾಗೋಳ, ಮಲ್ಲಪ್ಪ ಮಂಗನವರ, ದುಂಡಪ್ಪ ಕವಲಗಿ, ಮಲ್ಲು ಮದಭಾವಿ, ನಾನಾಗೌಡ ಮದರಕಿ, ದುಂಡಪ್ಪ ನೇಗಿನಾಳ ಮತ್ತಿತರರಿದ್ದರು.ಶಿಕ್ಷಕ ಎಸ್.ಸಿ. ಹಳ್ಳಿ, ಮಲ್ಲು ನೇಗಿನಾಳ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *