ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕರ್ನಾಟಕ ಜನ ವೇದಿಕೆ ಸಮಿತಿ ತಾ.ಘಟಕದಿಂದ ರಾಷ್ಟçಪತಿಗಳಿಗೆ ತಹಸೀಲ್ದಾರ್ ಭಿಮರಾಯ ಬಿ.ರಾಮಸಮುದ್ರ ರವರ ಮೂಲಕ ಮನವಿ ಸಲ್ಲಿಸಿ ಕರ್ನಾಟಕ ಜನ ವೇದಿಕೆ ತಾ.ಸಂಯೋಜಕರಾದ ರವೀಂದ್ರ ಜಾನೇಕಲ್ ಮಾತನಾಡಿ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯಾದ ವಿಜಯಪುರದಲ್ಲಿ ಜಿಲ್ಲೇಯ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಪಡೆಯುವುದಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಯ ಸ್ಥಾಪನೆಗಾಗಿ ವಿಜಯಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟ ಸಮಿತಿ ವತಿಯಿಂದ ಬಹಿದಿನಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ವಿಜಯಪುರ ನಗರದಲ್ಲಿ ಪಿ.ಪಿ.ಪಿ.ಮಾದರಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದನ್ನು ವಿರೋಧಿಸಿ ಸರ್ಕಾರದಿಂದಲ್ಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ನಡೆಸುತ್ತಿದ್ದ ಹೋರಾಟಗಾರರ ಮೇಲೆ ನೂರಾರು ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳು ದಾಳಿ ನಡೆಸಿ ಬಂದಿಸಿದ್ದಾರೆ. ಟೆಂಟ್ ಗಳನ್ನು ಕಿತ್ತು ಹಾಕಲಾಗಿದ್ದೆ ಕೂಡಲೇ ಶಾಂತಿಯುತ ಹೋರಾಟಗಾರರ ಮೇಲೆ ದಾಳಿ ಮಾಡಿದ ಆದಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಬಂದಿಸಿರುವ ಹೋರಾಟಗಾರರನ್ನು ಬಿಡುಗಡೆಗೊಳ್ಳಿಸಬೇಕು ಹಾಗೂ ಸರ್ಕಾರದಿಂದಲೇ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಕೀಯ ವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ವಸಂತ ಕೋಟ್ನೆಕಲ್, ದೇವರಾಜ್,ಆಬ್ರಹಾಂ ಪನ್ನೂರು,ಸದಾನಂದ ಪನ್ನೂರು, ಹಂಪಯ್ಯ, ಹುಲಿಗೆಮ್ಮ,ಚಾರ್ಲಿ ಉದ್ಬಾಳ್, ಬಸವರಾಜ ಹರವಿ, ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *