ಸಿಂಧನೂರು ಭೌಗೋಳಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಜನಸಂಖ್ಯೆಯಲ್ಲಿ, ಅಭಿವೃದ್ಧಿಯಲ್ಲಿ, ಕೃಷಿಯಲ್ಲಿ, ಕೈಗಾರಿಕೆಗಳು, ವಿವಿಧ ಕಛೇರಿಗಳು, ಪ್ರಾರಂಭವು ಸೇರಿದಂತೆ ಬಹಳ ಮುಂದುವರೆದ ಪ್ರದೇಶವಾಗಿದೆ. ಸಿಂಧನೂರು ತಾಲೂಕು, ಜಿಲ್ಲಾ ಕೇಂದ್ರವಾಗಲು ಉತ್ತಮ ವಾತಾವರಣ ಸೃಷ್ಟಿಯಾಗಿದೆ ಎಂದು ಡಾ.ಬಿ.ಎನ್.ಪಾಟೀಲ್ ಹೇಳಿದರು.
ಗುರುವಾರ ನಗರದ ಟೌನ್ ಹಾಲ್ ನಲ್ಲಿ ಸಿಂಧನೂರು ಜಿಲ್ಲಾ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾದ
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಎಪಿಎಂಸಿ ವರ್ತಕರ ಸಂಘದವರು, ಕನ್ನಡ ಸಾಹಿತ್ಯ ಪರಿಷತ್ತು, ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ವಕೀಲರ ಸಂಘ, ಪತ್ರಕರ್ತರ ಸಂಘದ ಮುಖಂಡರು ಆದಿಯಾಗಿ, ಪ್ರತಿಯೊಬ್ಬರು ಭಾಗವಹಿಸಿ ಸಿಂಧನೂರು ತಾಲೂಕನ್ನ ಜಿಲ್ಲಾ ಕೇಂದ್ರವನ್ನಾಗಿಸಲು ಪ್ರತಿಯೊಬ್ಬರು ಸತತ ಪ್ರಯತ್ನ ಮಾಡೋಣ ಎಂದರು.
ರಾಜಶೇಖರ ಪಾಟೀಲ್ ಮಾತನಾಡಿ, ಜಿಲ್ಲಾಯಾಗಲು ಬೇರೆ ತಾಲೂಕುಗಳ ಜೊತೆಗೆ ಈ ತಾಲೂಕಿನಲ್ಲಿರುವ ಯಾವ ಊರುಗಳನ್ನು ತಾಲೂಕು ಮಾಡಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಿ ತುರ್ವಿಹಾಳ ಪಟ್ಟಣ ಪಂಚಾಯತಿಯಿರುವ ಊರು ಜನಸಂಖ್ಯೆ ಜಾಸ್ತಿ ಇದೆ, ಶಾಲಾ ಕಾಲೇಜುಗಳಿವೆ, ನಾಡಕಛೇರಿ ಇದೆ, ಆರ್ಥಿಕ ಮತ್ತು ಭೌಗೋಳಿಕವಾಗಿ ಮುಂದುವರೆದ ಊರಾಗಿದೆ. ಅದರ ಜೊತೆಗೆ ಮಸ್ಕಿ, ಲಿಂಗಸ್ಗೂರು, ಕಾರಟಗಿ, ಸಿರಗುಪ್ಪ, ತಾವರಗೇರಾ, ಪ್ರಮುಖರ ಜೊತೆಗೆ ಮಾತನಾಡಿ, ಸಿಂಧನೂರು ಜಿಲ್ಲಾ ಕೇಂದ್ರ ಮಾಡೋಣ ಎಂದು ಮನವೋಲಿಸಬೇಕಾಗಿದೆ ಎಂದರು.
ಎಂ.ದೊಡ್ಡಬಸವರಾಜ ಮಾತನಾಡಿ, ಹಿರಿಯರ ಮುಖಂಡರ ಸಂಕಲ್ಪ ಸಿಂಧನೂರನ್ನು ಜಿಲ್ಲಾ ಕೇಂದ್ರ ಮಾಡಲು ಚೈತನ್ಯ, ಸ್ಪೂರ್ತಿ, ತುಂಬುವ ಕೊಂಡಿಯಾಗಿ ಕೆಲಸ ಮಾಡೋಣ, ಸರ್ವ ಧರ್ಮದವರಿಗೂ ಸರ್ವ ಪಕ್ಷದವರಿಗೂ, ರೈತರಿಗೂ, ಕೃಷಿಕರಿಗೂ, ನಾಗರಿಕರಿಗೂ, ಮಹಿಳೆಯರಿಗೂ, ವಿದ್ಯಾರ್ಥಿಗಳಿಗೂ ಸೇರಿದಂತೆ ಪ್ರತಿಯೊಬ್ಬರಿಗೂ ಸಿಂಧನೂರು ಜಿಲ್ಲಾ ಕೇಂದ್ರ ಆಗುವುದರಿಂದ ಅನುಕೂಲವಾಗುತ್ತದೆ. ಇದರಿಂದಾಗಿ 100 ಕಿ.ಮೀ.ಅಂತರದಲ್ಲಿರುವ ರಾಯಚೂರಿಗೆ ಹೋಗುವುದು ತಪ್ಪುತ್ತದೆ. ಜೊತೆಗೆ ನಮ್ಮ ರಾಜಕೀಯ ಹಿರಿಯ ನಾಯಕರಾದ ಕೆ.ವಿರುಪಾಕ್ಷಪ್ಪ, ಹಂಪನಗೌಡ ಬಾದರ್ಲಿ, ವೆಂಕಟರಾವ್ ನಾಡಗೌಡ, ಕೆ.ಕರಿಯಪ್ಪ, ಅನೇಕರು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದರು.
ವೈ.ನರೇಂದ್ರನಾಥ, ಜಮಾಅತೆ ಇಸ್ಲಾಂ ಹಿಂದ್ ತಾಲೂಕು ಅಧ್ಯಕ್ಷ ಹುಸೇನ್ ಸಾಬ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಕೆ ಗೋನಾಳ, ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ, ರೈತ ಮುಖಂಡ ಅಮೀನ್ ಪಾಷಾ ದಿದ್ದಿಗಿ, ಸರಸ್ವತಿ ಪಾಟೀಲ್, ಕೆ.ಭೀಮಣ್ಣ, ರವಿಗೌಡ ಮಲ್ಲದಗುಡ್ಡ, ಶ್ರೀದೇವಿ ಶ್ರೀನಿವಾಸ, ಎಚ್.ಎಫ್.ಮಸ್ಕಿ, ತಿಮ್ಮಣ್ಣ ನಾಯಕ್, ಕರೇಗೌಡ ಕುರುಕುಂದಿ, ಮೌನೇಶ ದೊರೆ, ಅಶೋಕ ಉಮಲೂಟಿ, ಶಾಂತನಗೌಡ ಜಾಗೀರದಾರ್,
ಸೇರಿದಂತೆ ಸಾರ್ವಜನಿಕರು ಸೇರಿದಂತೆ ಒಮ್ಮತದ ನಿರ್ಧಾರ ತಿಳಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಲಹೆ ಸೂಚನೆಗಳನ್ನು ನೀಡಿದರು.

