ತಾಳಿಕೋಟಿ: ತಮ್ಮ ಫೌಂಡೇಶನ್ ದ ಮೂಲಕ ಜಾತಿ ಮತ ಭೇದವಿಲ್ಲದೆ ಸಮಾಜದ ಎಲ್ಲ ವರ್ಗದ ಜನರ ಸೇವೆಯನ್ನು ಮಾಡುತ್ತಿರುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಯುವ ಮುಖಂಡ ಶಿವರಾಜ ಗುಂಡಕನಾಳ(ನಾಗೂರ) ಹೇಳಿದರು. ಗುರುವಾರ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಸಿ.ಬಿ.ಅಸ್ಕಿ ನೇತೃತ್ವದ ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಹಮ್ಮಿಕೊಂಡ 2026ರ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಫೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ಅವರು ಮಾತನಾಡಿ ನಮ್ಮ ಫೌಂಡೇಶನ್ ಮೂಲಕ ನಾನು ನನ್ನ ಶಕ್ತಿಗನುಸಾರವಾಗಿ ಕೆಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರವಿದೆ. ಈ ಬಾರಿ ನಮ್ಮ ಫೌಂಡೇಶನ್ ದಿಂದ ಹೊರ ತಂದ ನೂತನ ಕ್ಯಾಲೆಂಡರ್ ಬಹಳ ವಿಶಿಷ್ಟವಾಗಿದ್ದು ನಮ್ಮ ಮತಕ್ಷೇತ್ರದಲ್ಲಿ ನಡೆಯಲಿರುವ ಎಲ್ಲಾ ಪ್ರಮುಖ ಕಾರ್ಯಕ್ರಮಗಳ ಮಾಹಿತಿಯನ್ನು ಒಳಗೊಂಡಿದೆ. ಇದು ಶ್ರೀ ಮಠದಲ್ಲಿ ಪೂಜ್ಯರ ಹಾಗೂ ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಬಿಡುಗಡೆಗೊಳ್ಳುತ್ತಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದರು. ಸಾನಿಧ್ಯ ವಹಿಸಿ ವೇ.ಮೂ.ಮುರುಗೇಶ ವಿರಕ್ತಮಠ ಮಾತನಾಡಿ ಅಸ್ಕಿ ಅವರು ಶ್ರೀ ಮಠದ ಭಕ್ತರಾಗಿದ್ದಾರೆ ಅವರಿಗೆ ಖಾಸ್ಗತ ಅಜ್ಜನ ಆಶೀರ್ವಾದ ಸದಾ ಇದೆ ಅವರು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದರು. ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್.ಎಚ್.ಪಾಟೀಲ( ಬಾವೂರ), ಹುಸೇನ ಜಮಾದಾರ, ವೀರೇಶ ಬಾಗೇವಾಡಿ, ಇಬ್ರಾಹಿಂ ಮನ್ಸೂರ, ವಿಜಯಸಿಂಗ್ ಹಜೇರಿ, ಪರಶುರಾಮ ತಂಗಡಗಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಿಬೂಬ ಕೆಂಭಾವಿ, ಜೈಭೀಮ ಮುತ್ತಗಿ,ಶಮ್ಶುದ್ದೀನ ನಾಲಬಂದ, ಮಹಾಂತೇಶ ಬೊಮ್ಮನಹಳ್ಳಿ, ಬಸವರಾಜ ಜೀರಲಭಾವಿ(ಬಳಗಾನೂರ), ರೆಹಮಾನ್ ಅವಟಿ(ಕೊಣ್ಣೂರ), ಸದ್ದಾಮ್ ಮನಗೂಳಿ, ವೀರೇಶಗೌಡ ಅಸ್ಕಿ, ರಾಮನಗೌಡ ಹೊಸಮನಿ, ಎಲ್ಲಪ್ಪ ಮಾದರ, ಆಸಿಫ್ ಕೆಂಭಾವಿ,ರಮೇಶ ಹಿಪ್ಪರಗಿ, ಆನಂದ್ ಅಸ್ಕಿ, ಮಲ್ಲು ಢವಳಗಿ, ಆಬೀದ ಲಾಹೋರಿ,ಶಾಹಿದ್ ಶಿವಣಗಿ ಹಾಗೂ ಫೌಂಡೇಶನ್ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *