ಅರಕೇರ : ಜ 08 ತಾಲೂಕಿನ ನೂತನ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾಗಿ ಶ್ರೀ ರಾಚಣ್ಣ ಗಣೇಕಲ್, ಪ್ರಧಾನ ಕಾರ್ಯದರ್ಶಿಯಾಗಿ ಮಹಾದೇವಪ್ಪ ನಾಗೋಲಿಯನ್ನು ಗುರುವಾರ ನಾಗೋಲಿ‌ ಗ್ರಾಮದ ಶ್ರೀ ಹನುಮಯ್ಯಪ್ಪ ತಾತಾ ಮಠದ ಆವರಣದಲ್ಲಿ ಸೇರಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಮಚಂದ್ರ ಆಕಳಕುಂಪಿ, ಹನುಮಯ್ಯ ಕೊತ್ತದೊಡ್ಡಿ, ರಾಮು ಮಲ್ಲೇದೇವರಗುಡ್ಡ, ರಂಗಪ್ಪ ಭೂಮನಗುಂಡ, ಸಂಘಟನೆ ‌ಕಾರ್ಯದರ್ಶಿಯಾಗಿ ನಾಗರಾಜ ಜಾಡಲದಿನ್ನಿ, ಖಜಾಂಚಿಯಾಗಿ ಬಸವರಾಜ ಜಾಗಟಗಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನರಸಯ್ಯ ಜೇರದಬಂಡಿ, ಹನುಮಂತ ನಾಗೋಲಿ, ಹುಸೇನಯ್ಯ ಜುಟಮರಡಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಮಾಜದ ಗೌರವಾಧ್ಯಕ್ಷ ಚನ್ನಯಪ್ಪ ತಾತಾ ನಾಗೋಲಿ, ಜಿಲ್ಲಾಧ್ಯಕ್ಷ ಶ್ರೀ ನರಸನಗೌಡ ಶಕ್ತಿನಗರ, ಜಿಲ್ಲಾ ಉಪಾಧ್ಯಕ್ಷ ಅಶೋಕ ಚಾಗಭಾವಿ, ಮುನೇಶಪ್ಪ ತಾತಾ ನಾಗೋಲಿ, ಶರಣಗೌಡ ಸುಂಕೇಶ್ವರಹಾಳ, ಅಮರೇಶ ಇಟಗಿ, ನಾಗೇಂದ್ರ ಭೂಮನಗುಂಡ, ನರಸಪ್ಪ ಮಲ್ಲೇದೇವರಗುಡ್ಡ, ನರಸಣ್ಣ ಜೇರಬಂಡಿ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಸಮಾಜದ ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *