ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಭಿನಂದನಾ ಸಮಾರಂಭವನ್ನು ಜನವರಿ 10 ರಂದು ಬೆಳಿಗ್ಗೆ ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉದ್ಘಾಟನೆ ಶಾಸಕ ಹಂಪನಗೌಡ ಬಾದರ್ಲಿ, ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಹಾಗೂ ಎಂಎಲ್ಸಿ ಬಸನಗೌಡ ಬಾದರ್ಲಿ, ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾದ ತಿಮ್ಮಣ್ಣ ರಾಮತ್ನಾಳ್ ಅಧ್ಯಕ್ಷತೆ ವಹಿಸಿಕೊಳ್ಳುವರು. ಕಾರಟಗಿಯ ಪ್ರಾಧ್ಯಾಪಕ ಡಾ.ಹನುಮಂತಪ್ಪ ಚಂದಲಾಪುರ ಆಶಯ ನುಡಿಗಳನ್ನ ಆಡಲಿದ್ದಾರೆ. ಕಲ್ಬುರ್ಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೋ.ಡೊಣ್ಣೇಗೌಡರ ಪ್ರಸ್ತುತ ದಿನಮಾನದಲ್ಲಿ ವಾಲ್ಮೀಕಿ ಜನಾಂಗದ ಸ್ಥಿತಿ-ಗತಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.
ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಪ್ರಾಸ್ತಾವಿಕ ನುಡಿಗಳನ್ನ ನುಡಿಯಲಿದ್ದಾರೆ. ಜೊತೆಗೆ ಮುಖ್ಯ ಅಥಿತಿಗಳಾದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಡಿವೈಎಸ್ಪಿ ಜಿ.ಚಂದ್ರಶೇಖರ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ನಂತರ ಗೌರವಾಧ್ಯಕ್ಷ ತಿಮ್ಮಣ್ಣ ರಾಮತ್ನಾಳ್ ಮಾತನಾಡಿ, ಸರಿಸುಮಾರು 200 ನೌಕರರು ಸೇರಿ, ಈ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟವನ್ನು ಹುಟ್ಟುಹಾಕಿದ್ದೇವೆ. ಶೈಕ್ಷಣಿಕವಾಗಿ ಮುಂದುವರಿಯುವ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ, ಸೆಮಿನಾರಗಳನ್ನ ಮಾಡುವುದು. ಬಡ ಮಕ್ಕಳಿಗೆ ಸ್ಕಾಲರ್ಶಿಪ್ ಗಾಗಿ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡುವುದು. ಹೀಗೆ ಹತ್ತು ಹಲವಾರು ಧ್ಯೇಯ ಉದ್ದೇಶ ಇಟ್ಟುಕೊಂಡು ಒಕ್ಕೂಟ ರಚಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ: ಕಾರ್ಯಾಧ್ಯಕ್ಷ ವೀರೇಶ ನಾಯಕ ಕನ್ನಾರಿ, ಉಪಾಧ್ಯಕ್ಷ ಅಮರೇಶ ನಾಯಕ ಬೆಳ್ಳಿಗನೂರು, ಪ್ರಧಾನ ಕಾರ್ಯದರ್ಶಿ ಶಂಕರ ವಾಲಿಕಾರ, ಖಜಾಂಚಿ ಡಾ.ಬಸವರಾಜ ಎಲ್ ಚಿಗರಿ, ಮಾಧ್ಯಮ ಸಲಹೆಗಾರ ವೆಂಕೋಬ ನಾಯಕ ಬೂತಲದಿನ್ನಿ, ಸಾಂಸ್ಕೃತಿಕ ಕಾರ್ಯದರ್ಶಿ ತಿಮ್ಮಣ್ಣ ನಾಯಕ ಕಲ್ಮಂಗಿ, ನಾಗರಾಜ ನಾಯಕ, ಬಾಯಪ್ಪ, ಯಲ್ಲಾಲಿಂಗ, ಸೇರಿದಂತೆ ಅನೇಕ ಮುಖಂಡರಿದ್ದರು.

