ಪಿಎಸ್ಐ ಗ್ರಾಮೀಣ ಪೊಲೀಸ್ ಠಾಣೆ ತುರ್ವಿಹಾಳ ಹಾಗೂ ಗ್ರಾಮ ಪಂಚಾಯಿತಿ ಕಲಮಂಗಿ ಅಭಿವೃದ್ಧಿ ಅಧಿಕಾರಿಗಳು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿಯಿಂದ 2026ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಅಧ್ಯಕ್ಷ ದುರುಗೇಶ ಕಲಮಂಗಿ ಮಾತನಾಡಿ, ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿ ಯುವ ಜನರನ್ನು ಹೊಂದಿರುವ ಸಂಘಟನೆ ಕಾರ್ಯ ಪ್ರವೃತ್ತಿಯಾಗಿದೆ, ಸಮಿತಿಯ ದ್ಯೆಯ ವಾಕ್ಯ ವಿದ್ಯೆಯೆ ವಿಮೋಚನೆಗೆ ಹೆದ್ದಾರಿ ಎನ್ನುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡಿ, ವಿದ್ಯಾರ್ಥಿ ಯುವ ಜನರಿಗಾಗಿ ಹಗಲಿರಳು ಶ್ರಮಿಸುವಂತಹ ಸಂಘಟನೆಯಾಗಿದೆ. ಅದರ ಭಾಗವಾಗಿ ನಾಡಿನದ್ಯಂತ ವಿದ್ಯಾರ್ಥಿಗಳ ಏನೇ ಸಮಸ್ಯೆಯಿದ್ದರು ಅವರಿಗೆ ಸ್ಪಂದಿಸುತ್ತಾ ಹಲವಾರು ಹೋರಾಟಗಳ ಮುಖೇನ ವಿದ್ಯಾರ್ಥಿ ಯುವ ಜನರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿ ಕಂಡಿದ್ದೇವೆ.
ಅಷ್ಟೇ ಅಲ್ಲದೆ ರಾಜ್ಯದಾದ್ಯಂತ ಅಂಬೇಡ್ಕರ್ ಅವರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿ ಲಕ್ಷಾಂತರ ರೂಪಾಯಿ ಬಹುಮಾನಗಳನ್ನು ಕೂಡ ನೀಡುತ್ತಿದೆ. ಜೊತೆಗೆ ಉಚಿತ ಕೋಚಿಂಗ್ ಬಂದಿದ್ದೇವೆ ಇದರ ಭಾಗವಾಗಿ ಗುರುವಾರ ಸಮಿತಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಪಿಎಸ್ಐ ಸುಜಾತ ಮಾತನಾಡಿ, ಈ ಒಂದು ಕ್ಯಾಲೆಂಡರ್ ವಿಶೇಷವಾಗಿದೆ. ಮಹಾನ್ ವ್ಯಕ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಧನೆಯ ಒಂದೊಂದು ದಿನಾಂಕದಂದು ಮಾಡಿದ ಸಾಧನೆಯನ್ನು ಕುರಿತು ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ. ಜನವರಿಯಿಂದ ಹಿಡಿದು ಡಿಸೆಂಬರ್ ವರೆಗೆ ಅವರ ಸಾಧನೆಯನ್ನೇ ತೋರಿಸಿದ್ದಾರೆ ಎಂದು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹುಚ್ಚಪ್ಪ ನೇಗಲಿ ಅವರು ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ಎಂಬುವುದು ದಲಿತರಿಗಾಗಿ ಅಲ್ಲದೆ ಪ್ರತಿಯೊಬ್ಬರಿಗಾಗಿ ಸಹ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಇದ್ದರೆ, ಮುಂಚೂಣಿಯಲ್ಲಿ ಬಂದು ಸ್ಪಂದಿಸುವಂತಹ ಕಾರ್ಯ ಈ ಸಂಘಟನೆ ಮಾಡುತ್ತಿದೆ. ಕ್ಯಾಲೆಂಡರ್ ಬಿಡುಗಡೆ ಮಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರವರ ಸಾಧನೆಯ ಭಾವಚಿತ್ರಗಳನ್ನು ಸಹ ಅಳವಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ: ಆಂಜನೇಯ ನಾಯಕ ಗ್ರಾ.ಪಂ ಅಧ್ಯಕ್ಷ, ಮುಖಂಡರಾದ ಹನುಮಂತ ಕಲ್ಮಂಗಿ, ಮೊಹಮ್ಮದ್ ಸುಲೇಮಾನ್, ಶಶಿಕುಮಾರ, ಯಲ್ಲಪ್ಪ, ದೇವೇಂದ್ರ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

