ಲಿಂಗಸಗೂರು : ತಾಲುಕಿನ ಈಚನಾಳ, ಈಚನಾಳ ಕ್ರಾಸ್, ಈಚನಾಳ ತಾಂಡಾದ ಗ್ರಾಮಗಳ ಹಲವು ಕಡೆ ಪಾನ್ ಬೀಡಾ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈಚನಾಳ ಗ್ರಾಮ ಪಂಚಾಯತ ಮುಂಭಾಗದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಂಕಮ್ಮ ಮೇಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಬಕಾರಿ ಸರ್ಕಲ್ ಇನ್ಸಪೆರ್ಕ್ಟ ಲಕ್ಷ್ಮಿ ದೇವಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು .

ಇತ್ತಿಚಿನ ದಿನಗಳಲ್ಲಿ ಈಚನಾಳ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಇದ ರಿಂದ ಗ್ರಾಮದ ಬಹುತೇಕ ಯುವಕರು, ವೃದ್ಧರು, ಸಾರಾಯಿ ದಾಹಕ್ಕೆ ಬಲಿಯಾಗಿದ್ದಾರೆ.
ಹಾಗಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಇದರಿಂದ ಕುಟುಂಬಗಳ ಕಲಹಗಳಿಂದ ಗ್ರಾಮದಲ್ಲಿ ಅಶಾಂತಿ ಉಂ ಟಾಗುತ್ತಿದೆ, ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಈ ಕೂಡಲೇ ಆಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಬಕಾರಿ ವೃತ್ತನಿರೀಕ್ಷಕರಾದ ಲಕ್ಷ್ಮೀ ದೇವಿ,ಹಾಗೂ ಪಿಡಿಓ ಬಸಯ್ಯ ಅವರಿಗೆ ಸಂಜೀವಿನಿ ಮಹಿಳಾ
ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಯಂಕಮ್ಮ ಮೇಟಿ, ಕಾರ್ಯದರ್ಶಿ ಚಂದ್ರಿಕಾ, ಸರಸ್ವತಿ ಬಡಿಗೇರ್, ಶೋಭಾ ಮೇಟಿ,ರೈತ ಸಂಘದ ದೇವಪ್ಪ ಕರಡಿ, ಮಲ್ಲರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *