ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆ. ಹಂಚಿನಾಳ ಕ್ಯಾಂಪ್ (ಜೆ.ಆರ್ ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಎಸ್.ಡಿ.ಎಮ್.ಸಿಯ ಸಭೆಯು ಶಾಲಾ ಆವರಣದಲ್ಲಿ ನಡೆಸಲಾಯಿತು ಎಂದು ಮುಖ್ಯ ಶಿಕ್ಷಕ ನಿಂಗರಾಜ ಕೊಪ್ಪದ್ ಹೇಳಿದರು.
ಸಭೆಯಲ್ಲಿ ಹಾಜರಿದ್ದ ಪೋಷಕರು, ಶಿಕ್ಷಕರ ಸಮ್ಮುಖದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಆಯ್ಕೆಯಲ್ಲಿ ಯಲ್ಲಪ್ಪ ತಾಯಿ ರೇಣುಕಮ್ಮರನ್ನು ಅಧ್ಯಕ್ಷರನ್ನಾಗಿ, ಯಮನಮ್ಮ ಗಂಡ ಪರಶುರಾಮರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿ, ಮಕ್ಕಳ ಶಿಕ್ಷಣ ಗುಣಮಟ್ಟ, ಶಿಸ್ತು, ಸ್ವಚ್ಛತೆ ಹಾಗೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸಹ ಶಿಕ್ಷಕರಾದ ಐನಾಪರ್ತಿ ಶ್ರೀನಿವಾಸ್, ಮುಖಂಡರಾದ ಪೆತುರ್ ಹಾಗೂ ಪರಮೇಶ್, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

