ಸಿಂಧನೂರು : ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಜೋಳ ಬೆಳೆದಿದ್ದು, ಜನವರಿ 1 ರಿಂದಲೇ ಜೋಳ ಕಟಾವು ಪ್ರಾರಂಭವಾಗಿದ್ದು, ಸರಕಾರ ಮತ್ತು ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿಯ ನೊಂದಣಿ ಪ್ರಕ್ರಿಯೆ ಕೂಡ ಪ್ರಾರಂಭ ಮಾಡಿಲ್ಲಿ ಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡುವುದು ಯಾವಾಗ ಕಳೆದ ವರ್ಷ ಇದೆ ರೀತಿ ಜೋಳ ಖರೀದಿ ಕೇಂದ್ರ ತಡವಾಗಿ ಪ್ರಾರಂಭ ಮಾಡಿದ್ದರಿಂದ ರೈತರು ಬೆಳೆದ ಜೋಳ ಹುಳ ಬಂದು ಖರೀದಿ ಕೇಂದ್ರಕ್ಕಾಗಿ ಹರಸಾಹಸ ಪಡಬೇಕಾಯಿತು. ಜಿಲ್ಲೆಯ ರೈತರು ತಹಶೀಲ್ದಾರ ಕಛೇರಿ ಗೇಟ್ ಬಂದ್ ಮಾಡಿ ಹೋರಾಟ ಮಾಡಿದರೂ, ಒಂದು ಕಡೆ ರಸ್ತೆ ತಡೆ, ಒಂದು ಕಡೆ ಸಿಂಧನೂರು ಬಂದ್ ಕರೆ ವಿನೂತನ ಪ್ರತಿಭಟನೆಯ ಫಲವಾಗಿ ಖರೀದಿ ಕೇಂದ್ರ ಪ್ರಾರಂಭ ಮಾಡಿದರೂ ಕೇವಲ ಎಕರೆ ಗೆ 15 ಕ್ವಿಂಟಲ್ ಜೋಳ ತೆಗೆದುಕೊಂಡ ಪರಿಣಾಮ ಉಳಿದ ಜೋಳ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡಿ ಸಾಲದ ಸೂಳಿಗೆ ಸಿಲುಕಿರುವುದು ತಮ್ಮ ಕಣ್ಣಾ ಮುಂದೆ ಇದೆ.ಈ ವರ್ಷ ಅತಿ ಹೆಚ್ಚು ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಎಲ್ಲಾ ಸಂಪೂರ್ಣ ನಾಶವಾಗಿರುವುದು ಕೂಡ ತಮ್ಮ ಗಮನದಲ್ಲಿ ಇದೆ. ಈ ಜೋಳ ಬೆಳೆದ ರೈತರು ಕೂಡ ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ಪ್ರಾರಂಭವಾಗದೇ ಹೋದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಂಧರ್ಭ ನಿರ್ಮಾಣವಾಗುತ್ತದೆ. ರೈತರು ದಂಗೆ ಎದ್ದು ಬೀದಿ ಇಳಿದು ಹೋರಾಟ ಮಾಡುವ ಮುಂಚೆ ಜಿಲ್ಲಾಡಳಿತ ಎಚ್ಚತ್ತುಗೊಂಡು ಜೋಳ ನೋಂದಣಿ ಮತ್ತು ಜೋಳ ಖರೀದಿ ಕೇಂದ್ರ ಪ್ರಾರಂಭಿಸಿಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಲಾಯಿತು

