ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ರಾಜ್ಯ ಆರೋಗ್ಯ ಸಚಿವರಿಗೆ ಉಪತಹಸೀಲ್ದಾರ್ ವಿನಾಯಕರಾವ್ ರವರ ಮೂಲಕ ಮನವಿ ಸಲ್ಲಿಸಿ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ್ ಕಂಬದಾಳ್ ಮಾತನಾಡಿ ರಾಜ್ಯದ ಗ್ರಾಮೀಣ ಭಾಗದಲ್ಲಿನ 270 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಅರವಳಿಕೆ,ಮಕ್ಕಳ ತಜ್ಞರು,ಸ್ರೀರೋಗ ತಜ್ಞರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನಿವಾರಣೆಗಾಗಿ ವರ್ಗಹಿಸುವುದಕ್ಕೆ ರಾಜ್ಯದ ಆರೋಗ್ಯ ಇಲಾಖೆ ಮುಂದಾಗಿರುವುದರಿAದ ಗ್ರಾಮೀಣ ಭಾಗದ ಜನರು ಅಗತ್ಯ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರ್ಕಾರವು ಬಡಜನರಿಗೆ ಅಗತ್ಯವಿರುವ ಜನ ಔಷಾಧಿ ಕೇಂದ್ರಗಳನ್ನು ಮುಚ್ಚಿದು ಇಂದುಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ನೀಡುವ ಮೂಲಕ ಗ್ರಾಮೀಣ ಭಾಗದ ಬಡ ಜನರ ಆರೋಗ್ಯದ ಮೇಲೆ ಗಂಭಿರವಾದ ಪರಿಣಾಮವಾಗಲಿರುವುದರಿಂದ ರಾಜ್ಯದ ಆರೋಗ್ಯ ಇಲಾಖೆಯು ಪುನರ್ ಪರಿಶೀಲಿಸಿ ಜನಪರವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿ.ಎಸ್.ಪಿ, ತಾ.ಉಪಾಧ್ಯಕ್ಷರಾದ ವೆಂಕಟೇಶ್ ನಂದಿಹಾಳ್,ವಿರುಪನಗೌಡ ಜಟ್ಟಿ,ಹನುಮಂತ,ದುರ್ಗೇಶ್ ನೀರಮಾನ್ವಿ ಇದ್ದರು.

Leave a Reply

Your email address will not be published. Required fields are marked *