ಮಸ್ಕಿ ತಾಲೂಕಿನ ಹಾಲಾಪೂರ ನಾಡಕಚೇರಿಯೂ ಸಿಬ್ಬಂದಿಗಳಿಲ್ಲದೆ ಕುರ್ಚಿಗಳು ಖಾಲಿ ಖಾಲಿ, ಕಚೇರಿಗೆ ಬಂದಿರುವ ಸಾರ್ವಜನಿಕರು ಆಕ್ರೋಶದ ಮಾತುಗಳಾಡಿದರು. ನಾಡಕಚೇರಿಯಲ್ಲಿ ಐದು ಜನ ಗ್ರಾಮ ಲೆಕ್ಕಾಧಿಕಾರಿಗಳು, ಒಬ್ಬರು ಕಂದಾಯ ನಿರೀಕ್ಷೆಕರು, ಉಪ ತಹಸಿಲ್ದಾರ, ಒಬ್ಬರು ಕೇಸ್ ವರ್ಕರ್ ಇಷ್ಟೆಲ್ಲ ಸಿಬ್ಬಂದಿ ಒಳಗೊಂಡಿರುವ ನಾಡಕಚೇರಿ ಇಂದು 11:30 ಆದರೂ ಕೂಡ ಕೇವಲ ಒಬ್ಬರು ಕಂಪ್ಯೂಟರ್ ವರ್ಕರ್ ಮಾತ್ರ ಕಚೇರಿಯಲಿ ಕೆಲಸ ಮಾಡುತ್ತಿದ್ದು ಉಳಿದ ಯಾವ ಸಿಬ್ಬಂದಿ ಇಲ್ಲ, ಈ ಒಂದು ನಾಡು ಕಚೇರಿ ಅಂದಾಜು 30 ಹಳ್ಳಿ ಗಳನ್ನು ಹೊಂದಿರುವ ದೊಡ್ಡ ನಾಡ ಕಚೇರಿ, ಬೆಳಗ್ಗೆ 11:00ಗೆ ದೂರದ ಮಲದಗುಡ್ಡ , ಮಲ್ಕಾಪುರ, ತೋರಣದಿನ್ನಿ ಇಲ್ಲಿಂದ ಹೆಣ್ಣು ಮಕ್ಕಳು ಕಚೇರಿಗೆ ಬಂದು ಕುಂತು ಕುಂತು ಅಧಿಕಾರಗಳ ಗೈರು ನೋಡಿ ಬೇಸತ್ತು ಇಡಿಶಾಪ ಹಾಕಿ ಪುನ ಮನೆಗೆ ತೆರಳಿದರು, ಅಂಗವಿಕಲರು ಕೂಡ ಕಚೇರಿಗೆ ಅಲ್ಲಿದು ಬಂದರೆ ಇಲ್ಲಿ ಯಾವ ಅಧಿಕಾರಿ ಇಲ್ಲ, ಈ ಬಗ್ಗೆ ಮಸ್ಕಿ ತಹಸಿಲ್ದಾರ್ ರನ್ನು ಕರೆ ಮಾಡಿ ಸಂಪರ್ಕಿಸಿದಾಗ ತಹಶಿಲ್ದಾರ ಮಾತನಾಡಿ ಅಧಿಕಾರಿಗಳು ಬರುತ್ತಾರೆ ಹೆಚ್ಚುಕಮ್ಮಿ ಆಗುತ್ತೆ ಕಾಯಬೇಕು, 12 ಗಂಟೆಯಾದರೂ ಇನ್ನು ಕಾಯಬೇಕು ಎಂದು ನಿರ್ಲಕ್ಷ್ಯ ಅಧಿಕಾರಿಗಳ ಬಗ್ಗೆ ತಹಶೀಲ್ದಾರರು ಸಮರ್ಥನೆ ಮಾಡಿಕೊಳ್ಳುತ್ತಾರೆ ಇದೆಷ್ಟು ಸರಿ, ಒಟ್ಟಾರೆ ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿಗಳು, ಆರ್ ಐ ಹಾಗೂ ಇನ್ನಿತರರು ಮಸ್ಕಿಯ ಎಪಿಎಂಸಿಯಲ್ಲಿ ಸಿಗುತ್ತಾರೆ , ಹಾಲಾಪೂರಕ್ಕೆ ನಾಡಕಚೇರಿ ಏಕೆ ಬೇಕು ಇದನ್ನು ಮುಚ್ಚಿಬಿಡಿ ಎಂದು ನಾಡಕಚೇರಿಗೆ ದೂರದ ಗ್ರಾಮಗಳಿಂದ ಬಂದ ಈರನಗೌಡ ದಳಪತಿ, ರವಿ ದೇಸಾಯಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಕುಮಾರ ಎಮ್ ರಾಮಲದಿನ್ನಿ, ಅರಳಪ್ಪ ಯದ್ದಲದಿನ್ನಿ, ನಾಗಪ್ಪ ತೋರಣದಿನ್ನಿ, ಅಮರೇಶ ಜಂಗಮರಳ್ಳಿ , ಮುದುಕಪ್ಪ, ಮಂಜುಳಾ ಹಾಗೂ ಇನ್ನಿತರರು ಸೇರಿ ಅಂಗವಿಕಲರು, ಮಹಿಳೆಯರು ಬಹಳಷ್ಟು ಆಕ್ರೋಶ ಭರಿತರಾಗಿ ಮಾತನಾಡಿದರು.

