ದೇವದುರ್ಗ:ಜ.05- ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ಹೊರಹೊಮ್ಮುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಾಸಕಿ ಕರಿಯಮ್ಮ ನಾಯಕ್ ಹೇಳಿದರು ಅವರು ಪಟ್ಟಣದ ಡಾನ್ ಬಾಸ್ಕೋ ಶಾಲೆಯಲ್ಲಿ ಸೋಮವಾರ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದೇವದುರ್ಗ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ 2025/26 ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ಮಕ್ಕಳಲ್ಲಿ ಅನೇಕ ಕೌಶಲ್ಯಗಳು ಪಠ್ಯದೊಂದಿದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕಲೆ ನೃತ್ಯ ನಾಟಕ ಜನಪದ ಕಲೆಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದು ವಿದ್ಯಾರ್ಥಿಗಳು ಮುಂದಿನ ಜೀವನ ಭವಿಷ್ಯ ಉಜ್ವಲ ಮಾಡಿಕೊಳ್ಳಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದ ಕಲಿಕೆಯಲ್ಲಿ ಶಿಸ್ತು ಮತ್ತು ಸಂಸ್ಕಾರ ಕಲಿಯಬೇಕು ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು ಶಿಕ್ಷಕರ ಸಮಸ್ಯೆ ಹಾಗೂ ಸುಂದರವಾದ ಶಾಲಾ ಕಟ್ಟಡಗಳಿಗೆ ಒತ್ತು ನೀಡುವ ಮೂಲಕ ಮಕ್ಕಳ ಪ್ರತಿಭೆ ಹೊರತರಲಾಗುವುದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಯರಮರಸ್ ಡಯಟ್ ಕಾಲೇಜಿನ ಉಪ ನಿರ್ದೇಶಕರು, ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಸಮನ್ವಯಾಧಿಕಾರಿ ಶಿವರಾಜ್ ಪೂಜಾರಿ ಅರಕೆರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನ್ನರಾಒ, ಫಾದರ್ ಟೋನಿ ಹನುಮಂತರಾಯ ಶಾಖೆ ಎಂ ವಿ ಕವಡಿಮಠ ವಿರುಪ್ಪನ ಗೌಡ ನಾಗಡದಿನ್ನಿ,ರಂಗನಾಥ್, ಹೊನ್ನಪ್ಪ, ಮುಖಂಡರಾದ ಸಿದ್ದಣ್ಣ ಗಣೇಕಲ್,ಶರಣೇಗೌಡ ಸುಕೇಶ್ವರ,ಮಂಜುನಾಥ್ ಮಾತಲ್ಲಿ, ಸೇರಿದಂತೆ ಸಿ ಆರ್ ಪಿ ಶಿಕ್ಷಕರು ಮಕ್ಕಳು ಇದ್ದರು

