ಮಸ್ಕಿ ಕರ್ನಾಟಕ ಚರಿತ್ರೆಯಲ್ಲಿ ಮೊಟ್ಟ ಮೊದಲಿಗೆ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿದ ಹಿಂದುಳಿದ ವರ್ಗದ ನಾಯಕ , ಭಾಗ್ಯಗಳ ಸರದಾರ, ನೇರ ನುಡಿ ,ದಿಟ್ಟ ವ್ಯಕ್ತಿತ್ವ ಹೊಂದಿದ ಶ್ರೀ ಸಿದ್ದರಾಮಯ್ಯ ಅವರ ದಾಖಲೆ ಪ್ರಯುಕ್ತ ಇಂದು ಪಟ್ಟಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಹಾರ ಹಾಕಿ ಗೌರವ ಅರ್ಪಿಸಿ ನಂತರ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಹಾಗೂ ಬಡ ಮಕ್ಕಳ ಆಶ್ರಮದಲ್ಲಿ ನೋಟ್ ಬುಕ್ , ಆಹಾರ ಕಿಟ್, ಹಣ್ಣುಗಳನ್ನು ಮಕ್ಕಳಿಗೆ ಹಾಗೂ ಮಹಿಳೆಯರಿಗೂ, ಸಾರ್ವಜನಿಕರಿಗೂ ಸಿಹಿ ತಿನ್ನಿಸಿ ಸಂಭ್ರಮ ಆಚರಣೆ ಮಾಡಲಾಯಿತು. ನಂತರ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಅಧಿಕಾರ ಹೊಂದಿ ಕರ್ನಾಟಕ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ ಬರೆದ ಶ್ರೀ ಸಿದ್ದರಾಮಯ್ಯ ರವರನ್ನು ಕುರಿತು ಮುಖಂಡರು ಮಾತನಾಡಿದರು.ಈ ಸಂದರ್ಭದಲ್ಲಿ ಮಾಳಪ್ಪ ಪೂಜಾರಿ, ಬಿ ಕರಿಯಪ್ಪ ಹಾಲಾಪೂರ , ಮಲ್ಲನಗೌಡ ಸುಂಕನೂರ, ಕರಿಯಪ್ಪ ತಾಲೂಕು ಪಂಚಾಯತ ಕೆಡಿಪಿ ಸದಸ್ಯರು, ಹನುಮೇಶ್ ಬಾಗೋಡಿ , ಮಾಳಿಂಗರಾಯ ಕಡುಬೂರ, ನಾಗಭೂಷಣ ಅಧ್ಯಕ್ಷರು ಪ್ರಾಥಮಿಕ ಸಹಕಾರಿ ಸಂಘ ಮಸ್ಕಿ, ಮಲ್ಲಯ್ಯ ಮಸ್ಕಿ, ಬಸವರಾಜ ಕಡುಬೂರ, ಮಲ್ಲಪ್ಪ ಬಾರ್ಕೆರ, ಮಾನಯ್ಯ ಅಂಕಸದೊಡ್ಡಿ, ಗುಡುದಪ್ಪ ಕಡಬೂರು, ಅಯ್ಯಾಳಿ ಕ್ಯಾತ್ನಟ್ಟಿ, ದುರ್ಗೇಶ್ ಹೂವಿನಬಾವಿ, ಲಕ್ಷ್ಮಿಪತಿ ದೊಣ್ಣಮರಡಿ, ಮಲ್ಲಯ್ಯ ನೀಲಗಲ್, ಬಸವರಾಜ್ ಹಿಟ್ನಾಳ್, ದುರ್ಗಪ್ಪ ಬಸಾಪುರ್, ಗದ್ಯಪ್ಪ ಸಂತೆಕಲ್ಲೂರ್, ಬಸವರಾಜ್ ಗೂಗ್ಲಿ ಹಾಗೂ ಇತರರು ಇದ್ದರು.

