ತಾಳಿಕೋಟೆ: ತಾಲ್ಲೂಕಿನ ಹಿರೂರ ಗ್ರಾಮದ ಜಮೀನಿನಲ್ಲಿ ಚಿರತೆಯ ಹೆಜ್ಜೆಗುರುತುಗಳು ಕಂಡು ಬಂದಿದ್ದು ಡೋಣಿ ದಂಡೆಯ ಗುತ್ತಿಹಾಳ, ಬೋಳವಾಡ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿಸಿದೆ.
ಡಿ.31 ರಂದು ಚಿರತೆ ಹೆಜ್ಜೆ ಗುರುತುಗಳ ಬಗ್ಗೆ ರೈತರು ನೀಡಿದ ಮಾಹಿತಿಯ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಅದು ಚಿರತೆಯ ಹೆಜ್ಜೆಗುರುತು ಎಂಬುದನ್ನು ಖಚಿತಪಡಿಸಿದ್ದಾರೆ.
ಡಿ.31ರಿಂದ ಜನೆವರಿ 03 ಶನಿವಾರದವರೆಗೆ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಚಿರತೆಯ ಚಲನವಲನದ ಬಗ್ಗೆ ಪರಿಶೀಲನೆ ನಡೆಸಿದ್ದಾಗಿ ಚಿರತೆ ಹಾಯ್ದು ಹೋಗಿರುವ ಹೆಜ್ಜೆ ಗುರುತಗಳಿವೆ. ಆದರೆ ಅಲ್ಲಿ ಇಲ್ಲಿ ಸುಳಿದಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ, ದು ಸಿಂದಗಿ ತಾಲ್ಲೂಕಿನತ್ತ ಹೋಗಿರುವ ಸಾಧ್ಯತೆಗಳಿವೆ ಎಂದರು,
ಪತ್ರಿಕೆಯೊಂದಿಗೆ ಮಾತನಾಡಿದ ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಬಿ.ಐ.ಬಿರಾದಾರ, ಚಿರತೆ ಒಂದೇ ಕಡೆ ಇರುವುದಿಲ್ಲ, ಸದ್ಯ ಹೆಜ್ಜೆ ಗುರುತು ಹೋಗಿರುವ ಬಗ್ಗೆ ಮಾತ್ರ ಇವೆ. ಕಳೆದ ಮೂರುದಿನಗಳಿಂದ ನಮ್ಮ ಸಿಬ್ಬಂದಿ ಅದರ ಹೆಜ್ಜೆ ಗುರುತುಗಳ ಹುಡುಕಾದಲ್ಲಿದ್ದಾರೆ. ನಂತರ ಎಲ್ಲಿಯೂ ಪತ್ತೆಯಾಗಿಲ್ಲ, ಈ ಬಗ್ಗೆ ಆತಂಕ ಬೇಡ, ಆದರೆ ಜನತೆ ಜಾಗೃತರಾಗಿರುವಂತೆ ತಿಳಿಸಿದರು.

