ಸಿಂಧನೂರಿನ *ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶ್ವ COPD ದಿನಾಚರಣೆ ಕಾರ್ಯಕ್ರಮವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರು ( ನರ್ಸಿಂಗ್) ಶ್ರೀ ಲಾಜರ್ ಸಿರಿಲ್ ಜಿ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು “COPD ಬಗ್ಗೆ ಜಾಗೃತಿ ಸೃಷ್ಟಿಸುವುದು ಪ್ರತಿಯೊಬ್ಬ ನರ್ಸ್‌ಗಳ ಪ್ರಮುಖ ಸಾಮಾಜಿಕ ಜವಾಬ್ದಾರಿ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷರು ಇರ್ಫಾನ್ ಕೆ ಅತ್ತಾರ್ ವಹಿಸಿದ್ದು, ಅವರು ಮಾತನಾಡಿ ಆರೋಗ್ಯ ಜಾಗೃತಿಯ ಮಹತ್ವ ಹಾಗೂ ಸಮುದಾಯ ಆರೋಗ್ಯದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರವನ್ನು ಕುರಿತು ಸಮಗ್ರವಾದ ಪ್ರೇರಣಾದಾಯಕ ಅಧ್ಯಕ್ಷ ನುಡಿ ನುಡಿದರು .
ಈ ಸಂದರ್ಭ ಮೂರನೇ ವರ್ಷದ ವಿದ್ಯಾರ್ಥಿನಿ ಸಿದ್ದಲಿಂಗಮ್ಮ ಮತ್ತು ಎರಡನೇ ವರ್ಷದ ವಿದ್ಯಾರ್ಥಿ ಮಲ್ಲಿಕಾರ್ಜುನ ಟಿ ಅವರು COPD ಕುರಿತು ಜಾಗೃತಿ ಉಪನ್ಯಾಸ (Seminar) ನೀಡಿದರು. ಇವರ ಉಪನ್ಯಾಸದಲ್ಲಿ COPD ಯ ಕಾರಣಗಳು, ಅಪಾಯಕಾರಕ ಅಂಶಗಳು, ಲಕ್ಷಣಗಳು, ತಡೆಗಟ್ಟುವ ಕ್ರಮಗಳು, ನರ್ಸಿಂಗ್ ಪಾತ್ರ ಇತ್ಯಾದಿಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳು ಇರ್ಷಾದ್, ಉಪನ್ಯಾಸಕರಾದ ಸಂತೋಷಿ , ವೀರೇಶ್, ಪ್ರಶಾಂತ್, ಆಶುಪಾಷಾ, ಜ್ಞಾನೇಶ್ವರಿ, ರಾಧಿಕಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
COPD ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ ಈ ಕಾರ್ಯಕ್ರಮವು ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಆರೋಗ್ಯದ ಬಗ್ಗೆ ಜವಾಬ್ದಾರಿ, ಅರಿವು ಮತ್ತು ಸೇವಾಭಾವನೆ ಬೆಳೆಸುವ ಮಹತ್ವದ ವೇದಿಕೆಯಾಯಿತು……

Leave a Reply

Your email address will not be published. Required fields are marked *