ತಾಳಿಕೋಟಿ: ಅಧಿಕಾರ ಯಾವುದೇ ವ್ಯಕ್ತಿಗೆ ಶಾಶ್ವತ ಅಲ್ಲ ಇವತ್ತು ಇರುತ್ತೆ ನಾಳೆ ಹೋಗುತ್ತೆ ಆದರೆ ಜನರ ಆಶೀರ್ವಾದದಿಂದ ಸಿಕ್ಕ ಅಧಿಕಾರದ ಅವಧಿಯಲ್ಲಿ ಜನ ಮೆಚ್ಚುವ ಕೆಲಸ ಮಾಡಿದರೆ ಮಾತ್ರ ಅದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಅಂತಹ ಕೆಲಸವನ್ನು ಇಲ್ಲಿಯ ಗ್ರಾಪಂ ಸದಸ್ಯರು ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವುದರ ಮೂಲಕ ಮಾಡಿದ್ದಾರೆ, ಇದು ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು. ತಾಲೂಕಿನ ಕಲ್ಕೇರಿ ಗ್ರಾಮದ ಮುಖ್ಯ ಬಜಾರ್ ನಲ್ಲಿ ಜೀಪಂ ವಿಜಯಪುರ, ತಾಪಂ ತಾಳಿಕೋಟಿ ಹಾಗೂ ಗ್ರಾಪಂ ಕಾರ್ಯಾಲಯ ಕಲಿಕೇರಿ ಇವರ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಕೇರಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಕಡಿಮೆ ಅವಧಿಯಲ್ಲಿ ಈ ಮಳಗಿಗಳನ್ನು ನಿರ್ಮಾಣ ಮಾಡಿದ್ದಾರೆ ಆದರೆ ಈ ಜಾಗದಲ್ಲಿ 30 40 ವರ್ಷಗಳಿಂದ ಬಾಡಿಗೆ ಕಟ್ಟಿ ತಮ್ಮ ವ್ಯಾಪಾರವನ್ನು ಮಾಡಿಕೊಂಡಿದ್ದ ವ್ಯಾಪಾರಸ್ಥರಿಗೆ ಮೊದಲ ಆದ್ಯತೆ ನೀಡಿ ಊರಿಗೆ ಅಂಗಡಿ ನೀಡಬೇಕು ಎಂದು ಸೂಚಿಸುತ್ತೇನೆ ಎಂದರು. ಕಲಕೇರಿ ತಾಲೂಕಿನ ಅತಿ ದೊಡ್ಡ ಗ್ರಾಮವಾಗಿದ್ದು ಇದು ಹೋಬಳಿಯಾಗಲು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಈಗಾಗಲೇ ನಾನು ಕಲಕೇರಿ ಹಾಗೂ ಕೋರವಾರ ಗ್ರಾಮಗಳನ್ನು ಹೋಬಳಿಯನ್ನಾಗಿ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ ನನ್ನ ಅವಧಿಯಲ್ಲಿಯೇ ಈ ಕೆಲಸ ಆಗುವಂತೆ ಆಗಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ ಅಂಗಡಿಗಳಿಲ್ಲದೆ ಇಲ್ಲಿಯ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗಿತ್ತು ಗ್ರಾಪಂ ದವರು 1.13 ಗುಂಟೆ ಜಾಗದಲ್ಲಿ ಸುಸಜ್ಜಿತ ಹಾಗೂ ಸುಂದರವಾದ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಅದಕ್ಕೆ ಮಹಾತ್ಮ ಗಾಂಧೀಜಿಯವರ ಹೆಸರು ಇಟ್ಟಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.ಮುಖಂಡ ಸುರೇಶಧಣಿ ನಾಡಗೌಡ(ಬಿಂಜಲಭಾವಿ), ಪಿಡಿಓ ಬಿ.ಎಂ.ಸಾಗರ, ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ ಸೇರಿದಂತೆ ಇತರರು ಮಾತನಾಡಿದರು. ಕಲ್ಕೇರಿಯ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಹಾಗೂ ಮೌ.ನಾಸಿರ್ ಉಮರಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಿಕೇರಿ ಗ್ರಾಪಂ ನ 28 ಸದಸ್ಯರಿಗೆ ಶಾಸಕ ರಾಜುಗೌಡ ಪಾಟೀಲ ಸನ್ಮಾನಿಸಿ ಗೌರವಿಸಿದರು.ಗ್ರಾಪಂ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬೇಡರ್, ಸಂಗನಗೌಡ ಲಿಂಗದಳ್ಳಿ, ರಾಘು ದೊಡ್ಡಮನಿ, ಕನಕರಾಜ ವಡ್ಡರ್, ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪ ಗುಮಶೆಟ್ಟಿ, ಲಕ್ಕಪ್ಪ ಬಡಿಗೇರ್, ರುದ್ರಪ್ಪ ಗುಮಶೆಟ್ಟಿ, ದಾವಲಸಾಬ ನಾಯ್ಕೋಡಿ, ರಮೇಶ ಹೊಸಮನಿ, ಕಾಜಾಅಮೀನ್ ವಲ್ಲಿಬಾಯಿ, ದೇವೇಂದ್ರ ಜಂಬಗಿ, ಕಿರಣಕುಮಾರ ದೇಸಾಯಿ, ರಾಮರಾವ್ ದೇಶಮುಖ, ಪ್ರೇಮ ಪವಾರ,ಹಣಮಂತ ವಡ್ಡರ,ಡಾ.ಎಂ.ಎಂ.ಗುಡ್ನಾಳ, ಶರಣಪ್ಪ ಮೋಪಗಾರ ಹಾಗೂ ಗ್ರಾಮಸ್ಥರು ಇದ್ದರು. ಸುಧಾಕರ ಅಡಕಿ ಸ್ವಾಗತಿಸಿದರು. ಶಿವಾನಂದ ಸಜ್ಜನ ನಿರೂಪಿಸಿದರು,ಈರಘಂಟಿ ಮೋಪಗಾರ ವಂದಿಸಿದರು.

Leave a Reply

Your email address will not be published. Required fields are marked *