ತಾಳಿಕೋಟಿ: ರಾಷ್ಟ್ರೋತ್ಥಾನ ಪರಿಷತ್ತು ಕಾರ್ಯ ಆರಂಭ ಮಾಡಿ ಅರವತ್ತು ವರ್ಷಗಳಾದವು. ಸ್ವಸ್ಥ – ಸುಸ್ಥಿರ ಸಮಾಜ ನಿರ್ಮಾಣದ ಗುರಿಯಡೆಗಿನ ಪಯಣದಲ್ಲಿ ಇದೊಂದು ಮೈಲುಗಲ್ಲು. ಈ ಸಂದರ್ಭವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಪ್ರಮುಖವಾಗಿ ಐದು ವಿಷಯಗಳಲ್ಲಿ ಪ್ರತಿಯೊಬ್ಬರ ಯೋಚನೆ- ಯೋಜನೆಗಳು “ಹೀಗಿದ್ದರೆ ನಮಗೂ ಜಗತ್ತಿಗೂ ಒಳ್ಳೆಯದು” ಎಂಬ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರಲು ಉತ್ತೇಜಿಸುವ ಪಂಚ ಪರಿವರ್ತನೆ ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಎಲ್ಲೆಡೆ ನಡೆಸುತ್ತಾ ಬಂದಿದ್ದೇವೆ ಎಂದು ಕಾರ್ಯಕ್ರಮದ ಜ್ಯೋತಿ ಪ್ರಜ್ವಲಿಸುತ್ತಾ ನಿಂಗರಾಜ ಮನಗೂಳಿ ಜಿಲ್ಲಾ ಸಂಯೋಜಕರು ವಿಜಯಪುರ ಹೇಳಿದರು.
ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತ (ಶಿಕ್ಷಕರ ಪ್ರಶಿಕ್ಷಣ ಪ್ರಕಲ್ಪ) ವಿಜಯಪುರ ಅಡಿಯಲ್ಲಿ ಒಂದು ದಿನದ ಮಟ್ಟಿಗೆ ಪ್ರಶಿಕ್ಷಣ ಭಾರತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಭಾರತದಲ್ಲಿ ಸಾಮಾಜಿಕ ಮೌಲ್ಯಗಳು ಸಾಂಸ್ಕೃತಿಕ ಪರಂಪರೆಯ ಮುಂದುವರಿಕೆಗೆ ಹಾಗೂ ಭಾವನಾತ್ಮಕ ಸೌಖ್ಯಕ್ಕೆ ಕೌಟುಂಬಿಕ ವ್ಯವಸ್ಥೆ ತಳಹದಿಯಾಗಿದೆ. ಸೃಷ್ಟಿಯ ಪ್ರತಿಯೊಂದು ಅಂಶದಲ್ಲೂ ದೈವತ್ವವಿದೆ ಸಕಲ ಚರಾಚರ ಜಗತ್ತಿನ ಒಳಗೂ ಹೊರಗೂ ಒಂದೇ ದೈವತ್ವದ ವ್ಯಾಪಿಸಿದೆ ಜೀವ ಮತ್ತು ಜಗತ್ತಿನ ನಡುವೆ ಬೇರ್ಪಡಿಸಲಾಗದ ಅಂತರ್ ಸಂಬಂಧವಿದೆ ಎಂದು ಹೇಳಿದರು
ಉಪನ್ಯಾಸ ಅವಧಿ ಒಂದರ ವಿಷಯ : ಪಂಚಮುಖಿ ಶಿಕ್ಷಣ ಮತ್ತು ಪಂಚ ಪರಿವರ್ತನೆ ಕುರಿತು ಶ್ರೀನಿವಾಸ್ ಪಾಟೀಲ್ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿಭಾಗ ಸಂಯೋಜಕರು ರಾಷ್ಟ್ರೋತ್ಥಾನ ಪರಿಷತ್ ಬಾಗಲಕೋಟೆ ವಿದ್ಯಾರ್ಥಿಗಳನ್ನು ಕುರಿತು ಉಪನ್ಯಾಸ ನೀಡಿದರು
ಉಪನ್ಯಾಸ ಅವಧಿ ಎರಡು ವಿಷಯ ಭಾರತೀಯ ನೈಜ ಇತಿಹಾಸ ಕುರಿತು ಡಾ. ಆನಂದ್ ಕುಲಕರ್ಣಿ ಹಿರಿಯ ಇತಿಹಾಸ ಸಂಶೋಧಕರು ಮತ್ತು ಪ್ರಾಧ್ಯಾಪಕರು ವಿಜಯಪುರ ಉಪನ್ಯಾಸವನ್ನು ನೀಡಿದರು
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ.ಎಂ. ಬಂಟನೂರ ಮಾತನಾಡುತ್ತಾ
ಪಂಚಮುಖಿ ಶಿಕ್ಷಣವು ವ್ಯಕ್ತಿಗಳನ್ನು ರೂಪಿಸಿ, ಪಂಚ ಪರಿವರ್ತನೆಯ ಮೂಲಕ ರಾಷ್ಟ್ರ ಮತ್ತು ಸಮಾಜದ ಸುಸ್ಥಿರ, ಸ್ವಾವಲಂಬಿ ಭವಿಷ್ಯವನ್ನು ರೂಪಿಸುವ ಒಂದು ‘ವ್ಯವಸ್ಥಿತ ಕಾರ್ಯಕ್ರಮ’ವಾಗಿದೆ ಎಂದು ಹೇಳಿದರು ಕಾರ್ಯಕ್ರಮದ ವೇದಿಕೆ ಮೇಲೆ ಐ.ಕ್ಯೂ.ಎ.ಸಿ ಸಂಯೋಜಕರು ಉಮೇಶ ಮಂಗೋಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ. ಒಂದು ಮತ್ತು ಮೂರನೇ ಸೆಮಿಸ್ಟರನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾರ್ವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಐಶ್ವರ್ಯ ದೊಡ್ಡಮನಿ ಸ್ವಾಗತಿಸಿ ಪರಿಚಯಿಸಿದರು. ಮಲ್ಲಿಕಾರ್ಜುನ ವಂದಿಸಿದರು. ರೂಪಾ ಕಾಖಂಡಕಿ ನಿರೂಪಿಸಿದರು.

