ಮಾನ್ವಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾವಿತ್ರಿ ಬಾಯಿ ಪುಲೆ ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಸಾವಿತ್ರಿ ಬಾಯಿಪುಲೆ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜೆ. ಎಲ್. ಈರಣ್ಣ ಮಾತನಾಡಿ ಸಾವಿತ್ರಿ ಬಾಯಿಪುಲೆಯವರು 1848ರಲ್ಲಿ ಬಾಲಕಿಯರ ಮೊದಲ ಶಾಲೆಯನ್ನು ಸ್ಥಾಪಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿ,ಸಮಾಜ ಸುಧಾರಕಿ, ಕವಯತ್ರಿ, ಶಿಕ್ಷಣ ತಜ್ಞೆಯಾಗಿದ್ದರು. ಹಾಗೂ ಅಂದಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ಇಲ್ಲದೆ ಇರುವ ಸಮಯದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸುವ ಮೂಲಕ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಅಕ್ಷರದ ಅವ್ವ ಎನ್ನಿಸಿಕೊಂಡರು ಜೋತೆಗೆ ಸಾಮಾಜಿಕ ಅನಿಷ್ಟಗಳಾದ ಬಾಲ್ಯ ವಿವಾಹ ,ಜಾತಿ ಪದ್ಧತಿ, ಸತಿ ಪದ್ಧತಿ ,ವಿಧವೆಯರ ಕೇಶ ಮುಂಡನ ಇನ್ನಿತರ ಪದ್ದತಿಗಳ ವಿರುದ್ಧ ಹೋರಾಟ ನಡೆಸಿದರು. ಅವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧಿಕ್ಷಕರಾದ ರಂಗನಾಥ್ ಅತ್ತನೂರು, ಉಪನ್ಯಾಸಕರಾದ ಡಾ. ಬಸವರಾಜ ಕರಡಿಗುಡ್ಡ , ಭೀಮಸಿಂಗ್, ಸುರೇಶ್ ಹರನಹಳ್ಳಿ, ರಂಗಣ್ಣ, ಮರಿಯಮ್ಮ ಮತ್ತು ರೇಣುಕಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮಾನ್ವಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾವಿತ್ರಿ ಬಾಯಿ ಪುಲೆ ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *