ತಾಲೂಕಿನ ಪ್ರಸಿದ್ದ ಸಿದ್ದಪರ್ವತ ಬಗಳಾಮುಖಿ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಹಾಗೂ ಜ.3 ರಂದು ಅಂಬಾಮಠದ ರಥೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು, ಶಾಸಕರು, ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಅವರು ಶುಕ್ರವಾರ ಸಂಜೆ ಅಂಬಾಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಎಸ್.ಪಿ.ಅರುಣಾಂಶು ಗಿರಿ ಅವರು ಕೆಲಕಾಲ ಜಾತ್ರೆ ಮತ್ತು ಸಿಎಂ ಆಗಮನ ಹಿನ್ನೆಲೆ ಭದ್ರತೆ, ಜಾತ್ರೆಗೆ ಆಗಮಿಸುವ ಭಕ್ತರ ಹಿತ ಕಾಪಾಡುವುದು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೇ ಇರುವುದರ ಬಗ್ಗೆ ಚರ್ಚೆ ನಡೆಸಿದರು.

 

ಈ ವೇಳೆ: ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಇಒ ಚಂದ್ರಶೇಖರ್, ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಅಂಬಾಮಠದ ಸಿಬ್ಬಂದಿಗಳು, ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *