ಕವಿತಾಳ ಪಟ್ಟಣ ಸಮೀಪದ ಅಮೀನಗಡ ಗ್ರಾಮ ಪಂಚಾಯತಿ ಕಚೇರಿ ಮುಂದೆ ಇಂದು ಕೂಲಿಕಾರ್ಮಿಕರು ಗ್ರಾಮದ ಹತ್ತಿವೇ ನರೇಗಾ ಕೆಲಸ ನೀಡುವಂತೆ ಗ್ರಹಿಸಿ ಪ್ರತಿಭಟಿಸಿದ ಘಟನೆ ನೆಡೆದಿದೆ.
`ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಇರುವ ಹುಲಿಗುಡ್ಡದಲ್ಲಿ ನರೇಗಾ ಕಾಮಗಾರಿಗೆ ಕೆಲಸ ನಿಡಲಾಗುತ್ತಿದ್ದು ಹೋಗಿ ಬರಲು ಸಮಯವಾಗುತ್ತದೆ ಹಾಗು ಅಲ್ಲಿನ ಭೂಮಿ ಗಟ್ಟಿಯಾಗಿದ್ದು ನಿಗದಿತ ಅಳತೆಯಲ್ಲಿ ಕೆಲಸ ಪೂರ್ಣಗೊಳಿಸಲು ಆಗುತ್ತಿಲ್ಲ, ಹಾಗಾಗಿ ಹತ್ತಿರದಲ್ಲಿ ಕೆಲಸ ನಿಡಬೇಕು ಅಥವಾ ಅಲ್ಲಿಗೆ ಹೋಗಿ ಬರುವುದಕ್ಕೆ ವಾಹನದ ವ್ಯವಸ್ಥೆ ಮಾಡಬೇಕು, ಎಂದು ಕಾರ್ಮಿಕರಾದ ರಶೀದ್ ಸಾಬ್, ಶೇಖರಪ್ಪ, ಖಾಜಾಸಾಬ್, ಮಲ್ಲಯ್ಯ ,ಹಂಪಣ್ಣ, ಮಂಜುನಾಥ, ಖಾಜಾಸಾಬ್ ,ದುರಗಮ್ಮ, ಗಂಗಮ್ಮ, ಬಾಗ್ಯಮ್ಮ, ಶಿವಮ್ಮ ಸೇರಿದಂತೆ ಇನ್ನಿತರರು ಆಗ್ರಹಿಸಿದರು.
`ಸದರಿ ಸ್ಥಳದಲ್ಲಿ ಕೆಲಸ ಮಡಲು ಅನುಮತಿಸಲಾಗಿದೆ, ಅದು ಪೂರ್ಣವಾಗದ ಹೊರತು ಬೇರೆ ಸ್ಥಳದಲ್ಲಿ ತಕ್ಷಣ ಕೆಲಸ ನಿಡಲು ಆಗುವುದಿಲ್ಲ, ಈ ಕುರಿತು ಹಿರಿಯ ಅದೀಕಾರಿಗಳಿಗೆ ಮಾಹಿತಿ ನೀಡಲಾಗುವುದು’ಎಂದು ಗ್ರಾಮ ಪಂಚಾಯತಿ ಪಿಡಿಓ ತಿಪ್ಪಣ್ಣ ನಾಯಕ್ ತಿಳಿಸಿದರು.

