ಮಸ್ಕಿಯ ದೇವಾನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025 26 ನೇ ಸಾಲಿನ ಬಿಎ, ಬಿ ಕಾಂ, ಬಿಎಸ್ಸಿ, ಎಂಎ, ಎಂಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮಕ್ಕೆ ಶಾಸಕ ಆರ್. ಬಸನಗೌಡ ಚಾಲನೆ ನೀಡಿ . ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ… ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಸ್ಕಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದ ಹಣೆಪಟ್ಟಿಯನ್ನು ಹೋಗಲಾಡಿಸಲು ನಮ್ಮ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಅಧ್ಯಯನ ಮಾಡಿ 371 ಜೆ ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸೀಬೇಕು ಅಂದಾಗ ಮಾತ್ರ ನಾವೆಲ್ಲರೂ ಮುಂದೆ ಬರಲು ಸಾಧ್ಯ ಎಂದು ಶಾಸಕ ಆರ್ ಬಸನಗೌಡ ತುರುವಿಹಾಳ ವಿದ್ಯಾರ್ಥಿಗಳಿಗೆ ಹೇಳಿದರು.
ಪಟ್ಟಣದ ದೇವಾನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2025 26 ನೇ ಸಾಲಿನ ಬಿಎ, ಬಿ ಕಾಂ, ಬಿಎಸ್ಸಿ, ಎಂಎ, ಎಂಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇತಿಹಾಸ ಪ್ರಸಿದ್ಧವಾದ ಮಸ್ಕಿಯ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಶ್ರಮದಿಂದ ಅಧ್ಯಯನ ಮಾಡಿ ನೀವು ಉನ್ನತ ಹುದ್ದೆಗಳನ್ನು ಪಡೆಯಬೇಕು, ನಿಮ್ಮ ತಂದೆ ತಾಯಿಗಳ ಕನಸು ನನಸಾಗಿಸುವ ಪ್ರಯತ್ನ ನಿಮ್ಮದಾಗಲಿ, ನಿಮ್ಮ ಭವಿಷ್ಯ ಬಂಗಾರವಾಗಲಿ, 371 ಜೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತನೇ ರಾಂಕ್ ಪಡೆದ ಕು. ಗಂಗಾ ತಂದೆ ಶರಣು ಪಾ ಹಿರೇಮಠ, ರಾಜ್ಯಶಾಸ್ತ್ರ ವಿಭಾಗದಲ್ಲಿ ಆರನೇ ರ್ಯಾಂಕ್ ಪಡೆದ ಕು. ಕವಿತಾ ತಂದೆ ಮುದುಕಪ್ಪ, ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಯಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾದ ಕು. ಹುಲಿಗೆಮ್ಮ ತಂದೆ ಯಂಕಪ್ಪ ವಿದ್ಯಾರ್ಥಿಗಳಿಗೆ ಶಾಸಕರು ಸನ್ಮಾನ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಮರೆಮ್ಮನ ಹಳ್ಳಿಯ ಸಂಗೀತ ಪ್ರೇಮಿಗಳು ಹಾಗೂ ಶಿಕ್ಷಕರೂ ಆದ ರಹೆಮಾನಸಾಬ ನದಾಫ ಮಾತನಾಡುತ್ತಾ ಭಾರತೀಯ ಸಂಸ್ಕೃತಿಗೆ ಪೂರಕವಾಗಿ ತಂದೆ ತಾಯಿಗಳಿಗೆ, ಹಿರಿಯರಿಗೆ ಗುರುಗಳಿಗೆ ಹೇಗೆ ಗೌರವ ಕೊಡಬೇಕು, ದಾಸರ ಕೀರ್ತನೆ ಹಾಗೂ ವಚನಕಾರರ ವಚನಗಳನ್ನು ತಮ್ಮ ಸಿರಿ ಕಂಠದ ಗಾಯನದ ಮೂಲಕ ವಿದ್ಯಾರ್ಥಿಗಳಿಗೆ ಸನ್ಮಾಗ೯ದಲ್ಲಿ ನಡೆಯಬೇಕು ಎನ್ನುತ್ತಾ ಅನುಭಾವದ ಮಾತುಗಳನ್ನು ಅನೇಕ ದೃಷ್ಟಾಂತಗಳ ಹಿನ್ನೆಲೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಂತಗೌಡ ಪಾಟೀಲ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸಂಸ್ಕಾರ ಹಾಗೂ ಸಮಯ ಪ್ರಜ್ಞೆ ರೂಢಿಸಿಕೊಂಡರೆ ಯಶಸ್ಸು ತಾನಾಗಿಯೇ ಬರುತ್ತದೆ. ಈ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿಗೆ ಆಗಮಿಸಿದ ಗ್ರಂಥಪಾಲಕರಾದ ಡಾ. ಪರಮಾನಂದ ಹಂಗರಿಗಿ, ಸಹ ಪ್ರಾಧ್ಯಾಪಕರಾದ ಬಸವರಾಜ ತಡಕಲ್, ಸೂಪರ್ ಇನ್ಟೆಂಡೆಂಟ್ ಶ್ರೀಮತಿ ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಈ ಕಾಲೇಜಿನಿಂದ ವರ್ಗವಾಗಿ ಹೋದ ಸಹಾಯಕ ಪ್ರಾಧ್ಯಾಪಕರಾದ ಡಾ. ಲವಕುಮಾರ ಅವರಿಗೂ ಸನ್ಮಾನಿಸಲಾಯಿತು.
.
ಪ್ರಾಸ್ತಾವಿಕವಾಗಿ ಸಹಾಯಕ ಪ್ರಾಧ್ಯಾಪಕ ಇಮಾಮಸಾಬ ಮಾತನಾಡಿದರು. ವೇದಿಕೆಯಲ್ಲಿ ಡಾ. ರಾಮಣ್ಣ ಜುಮ್ಮಾ, ಬಸವರಾಜ ತಡಕಲ್, ಸುರೇಶ ಬಳಗಾನೂರ ವೇದಿಕೆ ಮೇಲಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಶಿವಗ್ಯಾನಪ್ಪ ಲಕ್ಕುಂದಿ, ರಾಜಿಯಾ, ಆಶಾ ಸಿ, ಕನ್ಯಾಕುಮಾರಿ, ಹಾಜಿಬಾಬಾ, ಪ್ರಭುದೇವ ಸಾಲಿಮಠ, ಡಾಕ್ಟರ್ ವಿರುಪನಗೌಡ, ಡಾ. ವೀರೇಶ, ಡಾ. ನಾಗರಾಜ , ಹುಚ್ಚೇಶ ನಾಗಲೀಕರ್, ಅಶ್ವಿನಿ, ಶ್ರೀದೇವಿ, ಮಂಗಳ ಸವಣೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಯಾಳಗಿ ನಿರೂಪಿಸಿಕರು. ಶರಣಬಸವ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು

