ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳು ಕಾರ್ಯಾಲಯ ಸಿಂಧನೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಗುಂದ ಇವರ ಇವರ ಸಂಯುಕ್ತ ಆಶ್ರಯದಲ್ಲಿ ಸಾಲಗುಂದ ಗ್ರಾಮದ ವ್ಯಾಪ್ತಿಗೆ ಬರುವ ಅಪ್ಪಾರಾವ್ ಕ್ಯಾಂಪ್ ನಲ್ಲಿ ” ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ” ಅಂಗವಾಗಿ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪರಸ್ಪರ ಕೈಜೋಡಿಸೋಣ. ತಂಬಾಕು ಸೇವನೆಯಿಂದ ವಿವಿಧ ರೀತಿಯ ಕ್ಯಾನ್ಸರ್ ಗಳು ಬರುವ ಸಾಧ್ಯತೆ ಇರುತ್ತದೆ ಸಿಗರೇಟ್ ಸೇದುವುದರಿಂದ ಮತ್ತು ಕ್ಯಾನ್ಸರ್ ಕಾರಕ ವಸ್ತುಗಳಿರುವುದರಿಂದ ಮಾದಕ ವಸ್ತುಗಳ ಸೇವನೆಯಿಂದ, ಟಾರ ಮತ್ತು ನಿಕೋಟಿನ್ ನಲ್ಲಿರುವ ಸುಮಾರು 2 ನೂರಕ್ಕೂ ಹೆಚ್ಚು ವಿಷ ವಸ್ತುಗಳಲ್ಲಿ ಅನೇಕ ವಸ್ತುಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಿವೆ ಕ್ಯಾನ್ಸರ್ ಪೂರಕವಾದ ಮತ್ತು ಕೆಲವು ಗಡ್ಡೆಗಳ ಬೆಳವಣಿಗೆಗೆ ಕಾರಣವಾಗುತ್ತದೆ, ಹತ್ತಿರದ ತಂಬಾಕು ವೆಸನ ಮುಕ್ತ ಕೇಂದ್ರಗಳಿಗೆ ಭೇಟಿ ನೀಡುವುದು ತಂಬಾಕು ಸೇವನೆ ಧೂಮಪಾನದ ದುಷ್ಪರಿಣಾಮಗಳ ಕುರಿತು ಉಚಿತ ಆಪ್ತ ಸಮಾಲೋಚನೆ ಆಧುನಿಕ ಯಂತ್ರಗಳ ಸಹಾಯದಿಂದ ತಂಬಾಕು ಸೇವನೆಯ ಪ್ರಮಾಣವನ್ನು ಪತ್ತೆಹಚ್ಚಲಾಗುವುದು ಹಾಗೂ ಅಗತ್ಯವಿರುವವರಿಗೆ ( nicotin replacement therapy NRT) ಚಿಕಿತ್ಸೆ ಕೊಡಲಾಗುವುದು, ” ಜೀವನ ಆಯ್ದುಕೊಳ್ಳಿ ತಂಬಾಕನಲ್ಲ ” ಸದರಿ ಕಾರ್ಯಕ್ರಮದಲ್ಲಿ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ,
ಶ್ರೀ ಶೈಫ್ ಖಾನ್ HIO PHC ಸಾಲಗುಂದ ಶ್ರೀಮತಿ ಅನ್ನಪೂರ್ಣ ಆಶಾ ಕಾರ್ಯಕರ್ತೆಯರು, ವಿ. ರವೀಂದ್ರ ಊರಿನ ಹಿರಿಯರು ಉಪಸ್ಥಿತರಿದ್ದರು.

