ಸಿಂಧನೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ನಗರದ ಎವಿಎಸ್ ಬ್ರಿಲಿಯಂಟ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲ್ಲೂಕಾಧ್ಯಕ್ಷ ಹೆಚ್.ಎಫ್. ಮಸ್ಕಿ ತಿಳಿಸಿದ್ದಾರೆ.
ಶುಕ್ರವಾರ ನೀಡಿದ ಹೇಳಿಕೆಯಲ್ಲಿ ಅವರು, ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಮರ್ಶಕ ಡಾ. ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಆಶಯ ನುಡಿ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮೊದಲನೇ ಗೋಷ್ಠಿ : “ಆಧುನಿಕ ಕನ್ನಡ ಕಾವ್ಯ ಪರಂಪರೆ”
ಸಂಪನ್ಮೂಲ ವ್ಯಕ್ತಿ : ಡಾ. ವೆಂಕಟಗಿರಿ ದಳವಾಯಿ
ಅಧ್ಯಕ್ಷತೆ : ಎಸ್. ಶರಣೇಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ
ಪ್ರತಿಕ್ರಿಯೆ :
ಡಾ. ಕೆ. ಖಾದರ್ ಭಾಷಾ, ಪ್ರಾಚಾರ್ಯ, ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಅಯ್ಯಪ್ಪ ಮೇಟಿ, ಮುಖ್ಯಗುರು, ಅಲಬನೂರು ಸರ್ಕಾರಿ ಪ್ರೌಢಶಾಲೆ
ಹುಸೇನಪ್ಪ ಅಮರಾಪುರ, ಅಧ್ಯಕ್ಷರು, ದಲಿತ ಸಾಹಿತ್ಯ ಪರಿಷತ್ತು
📝 ಎರಡನೇ ಗೋಷ್ಠಿ : “ಅನುವಾದ ಕಾವ್ಯ – ಆಶಯ ಮತ್ತು ಅಭಿವ್ಯಕ್ತಿ”
ಸಂಪನ್ಮೂಲ ವ್ಯಕ್ತಿ : ಡಾ. ಜಾಜಿ ದೇವೇಂದ್ರಪ್ಪ, ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು
ಅಧ್ಯಕ್ಷತೆ : ರಮಾದೇವಿ ಶಂಭೋಜಿ, ಜಿಲ್ಲಾ ಪ್ರತಿನಿಧಿ, ಕಸಾಪ
ಪ್ರತಿಕ್ರಿಯೆ :
ಗಜಲ್ ಕವಿ ಡಾ. ಶರೀಫ್ ಹಸಮಕಲ್
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಪ್ಪ ಹೊಸಳ್ಳಿ
ದಸಾಪದ ಪ್ರ. ಕಾರ್ಯದರ್ಶಿ ರಾಮಣ್ಣ ಹಿರೇಬೇರಗಿ ಸಮಾರೋಪ ಸಮಾರಂಭಕ್ಕೆ ಕಸಾಪ ತಾಲ್ಲೂಕಾಧ್ಯಕ್ಷ ಹೆಚ್.ಎಫ್. ಮಸ್ಕಿ ಅಧ್ಯಕ್ಷತೆ ವಹಿಸಲಿದ್ದು, ಲೇಖಕಿ ಡಾ. ರೇಣುಕಾ ಕೋಡಗುಂಟಿ ಸಮಾರೋಪ ನುಡಿಯನ್ನು ಪ್ರಸ್ತಾಪಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೆಚ್.ಎಫ್. ಮಸ್ಕಿ ಮನವಿ ಮಾಡಿದ್ದಾರೆ.

