ಸಿಂಧನೂರು : 02 ಜ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಾಸಕರಾದ ಹಂಪನಗೌಡ ಬಾದರ್ಲಿ ಅವರ 75ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ಹಾಗೂ ಆಶ್ರಮದ ಆಶ್ರಯದಾತರುಗಳಿಗೆ ಬೆಡ್ ಶೀಟ್ ಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮಠ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಆಶ್ರಮದ ವತಿಯಿಂದ ಹಂಪನಗೌಡ ಪಾದದಲ್ಲಿ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ ಮಾತನಾಡಿ ನಮ್ಮ ಊರಿನ ಪಕ್ಕದಲ್ಲೇ ನಮ್ಮ ಪಂಚಾಯತ್ ವ್ಯಾಪ್ತಿಗೆ ಬರುವ ಕುಗ್ರಾಮವಾದ ಹರೇಟ ನೂರಿನ ಬಡಜಂಗಮ ಹಾಗೂ ಆದಿಶಕ್ತಿ ದ್ದ್ಯಾವಮ್ಮ ದೇವಿಯ ಅರ್ಚಕರಾದ ನಮ್ಮ ಆಪ್ತರು ಗುರುಗಳಾದ ಅಮರಯ್ಯ ಸ್ವಾಮಿಯವರು ಹಾಗೂ ಅವರ ಕುಟುಂಬದ ಸದಸ್ಯರು ಹಲವು ವರ್ಷಗಳ ಕಾಲ ಗ್ರಾಮ ಪಂಚಾಯತ್ ಸದಸ್ಯರುಗಳಾಗಿ ನಿರಂತರ ಸಮಾಜ ಸೇವೆಗೆ ತಮ್ಮನ್ನು ತಾವು ಮುಡಿಪಾಗಿಟ್ಟಿರುವ ಈ ಕುಟುಂಬ ಸಿಂಧನೂರು ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆಲೆ ಇಲ್ಲದ ಅನಾಥರು ಮತ್ತು ಕುಟುಂಬದಿಂದ ಹಾಗೂ ಸಮಾಜದಿಂದ ತಿರಸ್ಕೃತಗೊಂಡವರಿಗೆ ತಮ್ಮ ಜೋಳಿಗೆಯ ಮೂಲಕ ಬದುಕು ಕಟ್ಟಿ ಕೊಟ್ಟಿರುವುದು ಮರುಗಳನ್ನು ಲಾಲನೆ ಪೋಷಣೆ ಮಾಡುತ್ತಿರುವುದು ಮಾನವೀಯತೆಗೆ ಮೆರಗು ತಂದಿದೆ. ಮತ್ತು ಈ ಸಂಸ್ಥೆಯು 2023ನೇ ಇಸ್ವಿಯಲ್ಲಿ ಇಡೀ ರಾಜ್ಯದಲ್ಲಿ ಏಕೈಕ ಉತ್ತಮ ಸಂಸ್ಥೆಯಾಗಿ ನಮ್ಮ ಸರ್ಕಾರದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ನಮ್ಮ ಸಿಂಧನೂರಿನ ಕರುಣಾಮಯಿ ಸಂಸ್ಕೃತಿಗೆ ಗೌರವ ಬಂದಂತಾಗಿದೆ. ನಾನು ನಮ್ಮ ಸರ್ಕಾರದ ಮೂಲಕ ಆಶ್ರಮದ ಬಹು ಮುಖ್ಯ ಬೇಡಿಕೆಯಾದ ಸ್ವಂತ ಜಾಗ ಹಾಗೂ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾರುಣ್ಯಾಶ್ರಮ ನಾಡಿನ ಉತ್ತಮ ಮಾದರಿ ಸೇವಾ ಸಂಸ್ಥೆಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಇಂತಹ ಸೇವಾ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೂಡ ಸಹಾಯ ಸಹಕಾರ ಮಾಡಲು ನನ್ನ ವಿನಂತಿ. ಇನ್ನೂ ಅನೇಕ ನೊಂದ ಅನಾಥ ಜೀವಿಗಳ ಬಾಳಿಗೆ ನಾಡಿಮಿಡಿತವಾಗಿ ನಮ್ಮ ಕಾರುಣ್ಯ ಆಶ್ರಮವು ಬೆಳಕು ನೀಡಲಿ ಸದಾವಕಾಲ ನಾವು ಕಾರುಣ್ಯ ಆಶ್ರಮದ ಸೇವೆಯ ಜೊತೆಗಿರುತ್ತೇವೆ ಎಂದು ಮಾತನಾಡಿ ಆಶ್ರಮದ ಸೇವೆಯನ್ನು ಶ್ಲಾಘಸಿ ಆಶ್ರಯದಾತರುಗಳಿಗೆ ಬೆಡ್ ಸೀಟ್ ಹಣ್ಣು ಹಂಪಲುಗಳನ್ನು ವಿತರಿಸಿಸಿದರು. ಈ ಕಾರ್ಯಕ್ರಮದಲ್ಲಿ ವೇ.ಮೂ. ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು ಸಂಸ್ಥಾಪಕರು ಕಾರುಣ್ಯ ಆಶ್ರಮ ಕೆ. ಚಿದಾನಂದಪ್ಪ ಗೌಡ ಕಾರ್ಯದರ್ಶಿಗಳು ಕಾರುಣ್ಯ ಆಶ್ರಮ. ಕರಿಬಸಯ್ಯಸ್ವಾಮಿ ಹಿರೇಮಠ ಉಪಾಧ್ಯಕ್ಷರು ಕಾರುಣ್ಯ ಆಶ್ರಮ. ಮಲ್ಲಿಕಾರ್ಜುನ ಸ್ವಾಮಿ ಕರಡಕಲ್ ಸದಸ್ಯರು ಕಾರುಣ್ಯ ಆಶ್ರಮ. ವೈ. ನರೇಂದ್ರನಾಥ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರ ಸಿಂಧನೂರು. ಖಾಜಿ ಮಲ್ಲಿಕ್ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರ. ಬಸವರಾಜ ಹಿರೇಗೌಡ್ರು ಮಾಜಿ ಜಿ. ಪಂ. ಸದಸ್ಯರು. ಆರ್. ಸಿ. ಪಾಟೀಲ್ ಕಾರ್ಯದರ್ಶಿಗಳು ಪಾಟೀಲ್ ಶಿಕ್ಷಣ ಸಂಸ್ಥೆ. ಸಂಜಯ್ ಪಾಟೀಲ್.ಬಸವರಾಜ ಸಾಹುಕಾರ. ಶಿವನಗೌಡ ಎಲೆಕೂಡ್ಲಿಗಿ. ಮೌಲಪ್ಪ ಮಾಡಸಿರವಾರ. ಕ್ರಾಂತಿ ಗೌಡ ಗುತ್ತೇದಾರರು ಬಾದರ್ಲಿ.ಮಮತಾ ಮೌಲಪ್ಪ ಮಾಡಸಿರಿವಾರ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರ.ಅಮರೇಗೌಡ ಮಲ್ಲಾಪುರ ಸಂಸ್ಥಾಪಕರು ವನಸಿರಿ ಫೌಂಡೇಶನ್. ಸುರೇಶ ಎಲೆಕೂಡ್ಲಿಗಿ. ಯಮನೂರಪ್ಪ ಪರಾಪುರ. ಹನುಮಂತ ಹೊಸಳ್ಳಿ. ನಾಗರಾಜ ಮುದ್ದಾಪುರ ಚಿದಾನಂದಯ್ಯ ಸ್ವಾಮಿ ಆಲಬನೂರು. ಕೆ. ವಾಮದೇವ ಹರೇಟನೂರು.ಬಸವರಾಜ ಭೀಮನಗೌಡ್ರು ಗೊಣ್ಣಿಗನೂರು. ವೀರಭದ್ರಗೌಡ ಗಿಣಿವಾರ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ ಹರೇಟನೂರು. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಹಾಗೂ ಹಂಪನಗೌಡ ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಭಾಗವಹಿಸಿ ಶುಭ ಹಾರೈಸಿದರು
ಕಾರುಣ್ಯಾಶ್ರಮ ನಾಡಿನ ಉತ್ತಮ ಮಾದರಿ ಸೇವಾ ಸಂಸ್ಥೆಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ – *ಹಂಪನಗೌಡ ಬಾದರ್ಲಿ ಶಾಸಕರು*
ಕಾರುಣ್ಯ ಆಶ್ರಮಕ್ಕೆ ಸ್ವಂತ ಜಾಗ ಹಾಗೂ ಅನುದಾನ ಆದಷ್ಟು ಬೇಗನೆ ಒದಗಿಸುತ್ತೇನೆ — *ಹಂಪನಗೌಡ ಬಾದರ್ಲಿ ಶಾಸಕರು*
ಕರುಣೆಯ ಕಾರುಣ್ಯಾಶ್ರಮಕ್ಕೆ ಸ್ವಂತ ಜಾಗ ಹಾಗೂ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ — *ಹಂಪನಗೌಡ ಬಾದರ್ಲಿ ಶಾಸಕರು


