ಮಾನ್ವಿ- ಇದೇ ತಿಂಗಳ 5 ರಂದು ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಜಿ. ಶಿವಶಂಕರ ಸಾಹುಕಾರ ಮತ್ತು ಸಹೋದರರು ತಿಳಿಸಿದ್ದಾರೆ.

 

3 ರಂದು ಶನಿವಾರ ಬನದ ಹುಣ್ಣಿಮೆಯ ಪ್ರಯುಕ್ತ ಅಂದು ಬೆಳಿಗ್ಗೆ ಹೊಳೆ ನೀರಿನ ಸೇವಾ ಮೆರವಣಿಗೆ ಜಡೇಬಸ್ಸಪ್ಪನವರ ಗುಡಿಯಿಂದ ಚೌಡೇಶ್ವರಿ ದೇವಸ್ಥಾನದವರೆಗೆ ಜರುಗುವುದು ನಂತರ ದೇವಿಗೆ ಮಹಾ ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯುವುದು ನಂತರ ಅಂದು ಮಧ್ಯಾಹ್ನ 1- 30 ಕ್ಕೆ ಮಹಾಪ್ರಸಾದ ಜರುಗುವುದು.

 

ದಿನಾಂಕ 4 ರವಿವಾರದಂದು ಅಮ್ಮನವರ ಉಚ್ಚಾಯ ಮಹೋತ್ಸವ ನಡೆಯುವುದು 5 ರಂದು ಸೋಮವಾರ ಸಂಜೆ ಶ್ರೀ ರಾಮಲಿಂಗ ಚೌಡೇಶ್ವರಿ ತಾಯಿಯ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.

ದಿನಾಂಕ 6 ಮಂಗಳವಾರದಂದು ಗರುಡುಪಟ ಇಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

 

ಅದ್ದರಿಂದ ಸರ್ವ ಜನತೆ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಮಲಿಂಗ ಚೌಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಂಗ ಸಮಾಜದ ಸೇವಾ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *