ಭೀಮಾ ಕೊರೆಗಾಂವ್ 208ನೇ ವಿಜಯೋತ್ಸವ — ನಗರದಾದ್ಯಂತ ಜೈಭೀಮ್ ಘೋಷಣೆಗಳ ನಡುವೆ ಭವ್ಯ ಪಥಸಂಚಲನ
ಸಿಂಧನೂರು : ಜನವರಿ 01:
ಭೀಮಾ ಕೊರೆಗಾಂವ್ 208ನೇ ವಿಜಯೋತ್ಸವದ ಅಂಗವಾಗಿ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದ ಹೃದಯಭಾಗದಲ್ಲಿ ಜೈಬೀಮ್ ರೆಜಿಮೆಂಟ್ ವತಿಯಿಂದ ಭವ್ಯ ಪಥಸಂಚಲನ ಜರುಗಿತು. ನೂರಾರು ಕಾರ್ಯಕರ್ತರು, ಯುವಕರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪಥಸಂಚಲನದಲ್ಲಿ ಭಾಗವಹಿಸಿ ಬೃಹತ್ ಏಕತೆಯ ನೋಟ ಮೂಡಿಸಿದರು. ಪಥಸಂಚಲನವು ತಾಲೂಕು ಪಂಚಾಯಿತಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯಿಂದ ಪ್ರಾರಂಭವಾಗಿ, ಗಾಂಧಿ ಸರ್ಕಲ್, ಕನಕದಾಸ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಯಲ್ಲಮ್ಮ ಗುಡಿ ಮುಂಭಾಗದ ಮುಖ್ಯರಸ್ತೆ ಮಾರ್ಗವಾಗಿ ಪಿಡಬ್ಲ್ಯುಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ಜೈಭೀಮ್ ರೆಜಿಮೆಂಟ್‌ನ ಯುವಕರು ನೀಲಿ ಧ್ವಜಗಳನ್ನು ಲೇವಡಿ, “ಜೈಭೀಮ್ — ಜೈ ಸಂವಿಧಾನ”, “ಅಂಬೇಡ್ಕರ್ ಅಮರರಾಗಲಿ”,
“ಭೀಮಾ ಕೊರೆಗಾಂವ್ ವಿಜಯೋತ್ಸವ ಚಿರಂಜೀವಿ”
“ಜೈಭೀಮ್” ಘೋಷಣೆಗಳಿಂದ ನಗರವು ಒಂದು ಕ್ಷಣ ಅಂಬೇಡ್ಕರ್ ಚಿಂತನೆಯೊಂದಿಗೆ ಕಂಗೊಳಿಸಿದಂತೆ ಕಾಣಿಸಿತು. ಕಾರ್ಯಕರ್ತರು ಭೀಮಾ ಕೊರೆಗಾಂವ್ ಯುದ್ಧದ ಪರಂಪರೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರುವ ಘೋಷಣೆಗಳನ್ನು ಕೂಗಿ ಜನರಲ್ಲಿ ಒಗ್ಗಟ್ಟಿನ ಸಂದೇಶ ಹರಿಸಿದರು.
ಪಥಸಂಚಲನದಲ್ಲಿ ಸಮಾಜಸೇವಕರು, ಯುವಕ ಸಂಘಗಳು ಮತ್ತು ವಿವಿಧ ಆಂಬೇಡ್ಕರೈಟ್ ಸಂಘಟನೆಗಳ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪಥಸಂಚಲನ ಶಿಸ್ತಿನ ಮಾದರಿಯಾಗಿ ಮೆಚ್ಚುಗೆ, ಪಥಸಂಚಲನವು ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು,
ಯಾವುದೇ ರೀತಿಯ ಗೊಂದಲ,
ಟ್ರಾಫಿಕ್ ಅಡಚಣೆ, ಸಾರ್ವಜನಿಕ ಅಸಮಾಧಾನ
ಉಂಟಾಗದಂತೆ ಸಂಘಟಕರು ಪರಿಪೂರ್ಣ ವ್ಯವಸ್ಥೆ ಮಾಡಿದ್ದರು.
ಪೊಲೀಸ್ ಮತ್ತು ಸ್ವಯಂಸೇವಕರ ಸಹಕಾರದಿಂದ ಮೆರವಣಿಗೆ ಸುಗಮವಾಗಿ ಪೂರ್ಣಗೊಂಡಿತು.
ಎಲ್ಲರೂ ಪಥಸಂಚಲನಕ್ಕೆ ಮುನ್ನಡೆ ನೀಡಿದರು.
ವಿಜಯೋತ್ಸವದ ಸಾರ — ಸಮಾನತೆ ಮತ್ತು ನ್ಯಾಯ
ಮುಖಂಡರು ಮಾತನಾಡಿ, ಭೀಮಾ ಕೊರೆಗಾಂವ್ ಯುದ್ಧವು
ಶೋಷಿತರ ಹೋರಾಟ, ಸ್ವಾಭಿಮಾನ,ಅಸಮಾನತೆಗೆ ವಿರುದ್ಧದ ಸಶಕ್ತ ಸಂದೇಶ ಎಂಬುದಾಗಿ ವಿವರಿಸಿ,
ಅಂಬೇಡ್ಕರ್ ಅವರ ಸಂವಿಧಾನವು ಸಮಾನತೆ ಮತ್ತು ಸ್ವಾತಂತ್ರ್ಯದ ಮೂಲ,ಯುವಕರಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಏಕತೆಯ ಮೌಲ್ಯ ಬೆಳೆಸುವುದು ವಿಜಯೋತ್ಸವದ ಗುರಿ ಎಂದು ವಿವರಿಸಿದರು. ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು ಯುವಕರನ್ನು ಪ್ರೇರೇಪಿಸಿದರು. ಸಿಂಧನೂರು ನಗರದಲ್ಲಿ ನಡೆದ ಈ ಪಥಸಂಚಲನವು ಶಾಂತಿ, ಸಂಘಟಿತ ಶಕ್ತಿ,ಅಂಬೇಡ್ಕರ್ ತತ್ವಪ್ರೇಮ, ಭೀಮಾ ಕೊರೆಗಾಂವ್ ಪರಂಪರೆಯ ಗೌರವ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿ ಯಶಸ್ವಿಯಾಯಿತು.
ನಗರದ ನಾಗರಿಕರು ಹಾಗೂ ಸಂಘಟನೆಗಳ ಸಕ್ರಿಯ ಪಾಲ್ಗೊಳ್ಳಿಕೆಯಿಂದ 208ನೇ ವಿಜಯೋತ್ಸವದ ಆಚರಣೆಗೆ ಐತಿಹಾಸಿಕ ಮೆರಗು ದೊರೆಯಿತು. ಈ ಪಥ ಸಂಚಲನದಲ್ಲಿ ಮುಖ್ಯವಾಗಿ ಸಾರ್ವಜನಿಕರಿಂದ ಮುನ್ನಡೆಸಲ್ಪಟ್ಟ ಪಥಸಂಚಲನಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ತಹಸಿಲ್ದಾರ್ ಅರುಣ್ ದೇಸಾಯಿ ಚಾಲನೆಯನ್ನು ನೀಡಿದರು. ಗಂಗಾಧರ, ಎಂ. ಮರಿಯಪ್ಪ, ಅಮರೇಶ ಗಿರಿಜಾಲಿ, ಬೀಮ್ ಆರ್ಮಿ ಅಧ್ಯಕ್ಷ ಪ್ರವೀಣ್ ದುಮತಿ, ಮೌನೇಶ ಜಾಲವಾಡಗಿ, ಹುಸೇನಪ್ಪ , ಅಮರೇಶ್ , ಸೇರಿದಂತೆ ಅನೇಕ ನಾಯಕರು ಹಾಗೂ ಸಂಘಟನಾ ಪದಾಧಿಕಾರಿಗಳು ಸಾನ್ನಿಧ್ಯ ವಹಿಸಿದ್ದರು. ಪಥಸಂಚಲನಕ್ಕೆ ನೂರಾರು ಯುವಕರು, ಮಹಿಳಾ ಕಾರ್ಯಕರ್ತರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಶಿಸ್ತಿನ ಸಾಲುಗಳಲ್ಲಿ ನಿಂತು ಭಾಗವಹಿಸಿದರು.
ಎಲ್ಲರೂ ನೀಲಿ ಶಾಲು, ನೀಲಿ ಧ್ವಜ, ಅಂಬೇಡ್ಕರ್ ಫೋಟೋಗಳು ಮತ್ತು ಭೀಮಾ ಕೊರೆಗಾಂವ್ ಚಿಹ್ನೆಗಳನ್ನು ತೊಟ್ಟು ಸಂಭ್ರಮಿಸಿದರು.

ಶಾಸಕ ಹಂಪನಗೌಡ ಬಾದರ್ಲಿ ಹಾಗೂ ತಹಸಿಲ್ದಾರ್ ಅರುಣ್ ದೇಸಾಯಿ ಚಾಲನೆಯನ್ನು ನೀಡಿದರು.

