ಶಾಸಕ ಹಂಪನಗೌಡ ಬಾದರ್ಲಿ 75ನೇ ಜನ್ಮದಿನ ಕಾರ್ಯಕ್ರಮಕ್ಕೆ ಗಣ್ಯರ ಸಮಾಗಮ
ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಜ 1 ರಂದು ಭಾವಪೂರ್ಣವಾಗಿ ನಡೆದ ಶಾಸಕ ಹಂಪನಗೌಡ ಬಾದರ್ಲಿ ಅವರ 75ನೇ ಜನ್ಮದಿನೋತ್ಸವಕ್ಕೆ ಅಭಿಮಾನಿಗಳು, ನಾಯಕರು, ಹಿತೈಷಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಂದ ಭಾರೀ ಪ್ರತಿಕ್ರಿಯೆ ದೊರೆಯಿತು. ನಗರದಲ್ಲಿ ಜನಪ್ರತಿನಿಧಿಯನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮವು ಹಬ್ಬದ ಸಂಭ್ರಮದ ವಾತಾವರಣವನ್ನು ಮೂಡಿಸಿತು.
ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಶಾಸಕರ ಸಾರ್ವಜನಿಕ ಬದುಕು, ಸೇವಾಸ್ಪೂರ್ತಿ ಹಾಗೂ ಸಿಂಧನೂರಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡು ಗೌರವಿಸಿದರು. ಬಾದರ್ಲಿ ಅವರು ತಮ್ಮ ರಾಜಕೀಯ ಬದುಕಿನ ಸಾಲುಸಾಲು ಹಾದಿಯನ್ನು ನೆನಪಿಸಿಕೊಂಡು, ಜನತೆಯ ನಂಬಿಕೆ, ಪ್ರೀತಿ ಮತ್ತು ಆಶೀರ್ವಾದವೇ ನನಗೆ ಶಕ್ತಿ ಎಂಬುದಾಗಿ ಹೇಳಿದರು.
ವಿವಿಧ ಸಂಘಟನೆಗಳು, ರೈತರ ಬಳಗ, ಯುವಕರ ತಂಡಗಳು ಹಾಗೂ ಸಿಂಧನೂರಿನ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಶಾಸಕರಿಗೆ ಹಾರೈಕೆ ಸಲ್ಲಿಸಿದರು. ನೆರೆಹೊರೆಯ ಗ್ರಾಮಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರಿಂದ ಟೌನ್‌ಹಾಲ್ ಪ್ರದೇಶದಲ್ಲಿ ವಿಶೇಷ ಚೈತನ್ಯ ಕಂಡುಬಂತು.
ಕಾರ್ಯಕ್ರಮದಲ್ಲಿ ಕೇಕ್ ಕಟ್, ಸ್ಮರಣಿಕೆ ಪ್ರದಾನ, ಹೂಗುಚ್ಛ, ಶಾಲು–ಶ್ರೀಫಲ ವಂದನೆ ನಡೆಯಿತು. ಸಾರ್ವಜನಿಕರಿಂದ ಬಂದ ಅನೇಕ ಶುಭಾಶಯ ಸಂದೇಶಗಳನ್ನು ಕಾರ್ಯಕ್ರಮದಲ್ಲಿ ಓದಿಕೋಡಲಾಯಿತು. ವೇದಿಕೆಯಲ್ಲಿ ಮಾತನಾಡಿದ ಗಣ್ಯರು, ಬಾದರ್ಲಿ ಅವರ 40 ವರ್ಷಗಳ ಸಾರ್ವಜನಿಕ ಸೇವೆ ಸಿಂಧನೂರಿನ ರೈತ–ಕಾರ್ಮಿಕ–ಬಡವರ ಕಲ್ಯಾಣಕ್ಕಾಗಿ ಕೈಗೊಂಡ ಯೋಜನೆಗಳು ಸಮಾಜ ಮತ್ತು ಧರ್ಮಗಳ ನಡುವೆ ಐಕ್ಯತೆಯನ್ನು ಕಾಪಾಡಲು ಅಭಿನವ ಪ್ರಯತ್ನಗಳು ಇವುಗಳನ್ನು ನೆನಪಿಸಿಕೊಂಡು ಅವರ ಸೇವಾಭಾವವನ್ನು ಶ್ಲಾಘಿಸಿದರು.ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ನೆಲದೊಡನೆ ಬೆರೆಯುವ ಸ್ವಭಾವ, ಮತ್ತು ಪಕ್ಷದ ಕಾರ್ಯಕರ್ತರಿಗೆ ನೀಡುವ ಪ್ರೋತ್ಸಾಹ ಇವೇ ಬಾದರ್ಲಿ ಅವರ ಜನಪ್ರೀಯತೆಯ ಮೂಲ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.
ಶಾಸಕ ಬಾದರ್ಲಿ ಪ್ರತಿಕ್ರಿಯೆ
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,“ಜನತೆ ನನಗೆ ನೀಡಿರುವ ಪ್ರೀತಿ–ಗೌರವವೇ ನನಗೆ ನಿಜವಾದ ಸಂಪತ್ತು. ನಾನು ಪಡೆದಿರುವ ಅಧಿಕಾರ ಜನಸೇವೆಗೆ ಮಾತ್ರ. ಸಿಂಧನೂರಿನ ಅಭಿವೃದ್ಧಿಯೇ ನನ್ನ ಆದ್ಯತೆ,” ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಸಂದೇಶದಂತೆ ನನ್ನ ಜೀವನ ಮತ್ತು ರಾಜಕೀಯ ಸೋಲು-ಗೆಲುವಿನಲ್ಲೂ ಸದಾ ನನ್ನೊಡಗೂಡಿದ್ದೂ ಜನುಮ ದಿನದಂದು ಶುಭಹಾರೈಸಿ, ಹರಸಿರುವ ಕಾಂಗ್ರೆಸ್ ಪಕ್ಷದ ಹಿರಿಯರಿಗೂ, ಚುನಾಯಿತ ಪ್ರತಿನಿಧಿಗಳಿಗೂ, ಯುವಕರಿಗೂ, ಬೆಂಬಲಿಗರಿಗೂ ಹಾಗೂ ಅಪಾರ ಜನತೆಗೆ ಮನದುಂಬಿ ಕೃತಜ್ಞತೆಗಳನ್ನು ಸಲ್ಲಿಸಿ ಭಾವಪೂರ್ಣವಾಗಿ ಪ್ರತಿಕ್ರಿಯಿಸಿದರು.ಟೌನ್‌ಹಾಲ್ ಪ್ರವೇಶದ್ವಾರದಿಂದಲೇ ಹಾರೈಕೆ ಪ್ಲೆಕ್ಸಿಗಳು, ಬ್ಯಾನರ್‌ಗಳು, ಪೋಸ್ಟರ್‌ಗಳು ಅಲಂಕರಣಗೊಂಡಿದ್ದು
ಈ ಕಾರ್ಯಕ್ರಮಕ್ಕೆ ಸೋಮನಾಥ ಶಿವಾಚಾರ್ಯರು ವಿಶೇಷ ಅತಿಥಿಗಳಾಗಿ ಹಾಜರಿದ್ದು ಶಾಸಕರಿಗೆ ಆಶೀರ್ವಚನ ನೀಡಿದರು. ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ನಾಯಕ ಆರ್. ತಿಮ್ಮಯ್ಯ, ಎಸ್.ಬಿ. ಅಶೋಕ ಭೂಪಾಲ್, ಡಾ. ಬಿ.ಎನ್. ಪಾಟೀಲ್, ವಿಕಾಸ ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ಖಾಜಿ ಮಲಿಕ್ , ಬಾಬಾಗೌಡ , ವಕೀಲ ಎಂ. ಕಾಳಿಂಗಪ್ಪ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು,ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

