ಮಾನ್ವಿ: ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಬಯಲು ಜಾಗದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ,ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ 3 ನೇ ಹಂತದ ಜಲಜಾಗೃತಿ-ಜನಜಾಗ್ರತಿ ಪಾದಯಾತ್ರೆ ಕಾರ್ಯಕ್ರಮವನ್ನು ಶಾಸಕ ಹಂಪಯ್ಯನಾಯಕ ಉದ್ಘಾಟಿಸಿ ಮಾತನಾಡಿ ನಮ್ಮ ನಾಡಿನ ನದಿಗಳು ಜನರಿಗೆ ಜಾನುವಾರುಗಳಿಗೆ, ಪ್ರಾಣಿ,ಪಕ್ಷಿಗಳಿಗೆ ಜೀವಜಲವನ್ನು ನೀಡುವುದರೊಂದಿಗೆ ನಮ್ಮೆಲರಿಗೂ ಮುಖ್ಯವಾಗಿ ಆಗತ್ಯವಾಗಿರುವ ಕೃಷಿ ಆಹಾರದ ಉತ್ಪದಾನೆಗೆ ಕೂಡ ನೀರನ್ನು ನೀಡುತ್ತವೆ ನಮ್ಮ ರಾಜ್ಯದ ಜೀವನಾಡಿಯಾಗಿರುವ ತುಂಗಭದ್ರ ನದಿಗೆ ನಾವು ನಿತ್ಯ ಪಟ್ಟಣಗಳ ತ್ಯಾಜ್ಯ,ಕೈಗಾರಿಕೆಗಳ ತ್ಯಾಜ್ಯವನ್ನು ಹರಿಸುವ ಮೂಲಕ ನದಿಯ ನೀರನ್ನು ಕಲುಷಿತಗೊಳಿಸಿ ಇಂದು ನದಿಗಳ ನೀರನ್ನು ಕುಡಿಯುವುದನ್ನು ಕೂಡ ಯೋಗ್ಯವಾಲ್ಲದ ಹಾಗೆ ಮಾಡಿಕೊಂಡಿದ್ದೇವೆ ಅದ್ದರಿಂದ ಸರ್ಕಾರದ ಜೋತೆಗೆ ನಾವು ಕೂಡ ವೈಯುಕ್ತಿಕವಾಗಿ ನದಿ ಪರಿಸರವನ್ನು ಮಾಲಿನ್ಯಗೊಳಿಸದಂತೆ ಉತ್ತಮ ಆರೋಗ್ಯಕ್ಕಾಗಿ ನದಿಯ ನೀರನ್ನು ಶುದ್ದವಾಗಿರುವಂತೆ ನೋಡಿಕೊಳ್ಳುವ ಜವಾಬ್ದರಿ ಕೂಡ ಪ್ರತಿಯೊಬ್ಬರಾದಾಗಿದ್ದು ,ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಯು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ವೀರಾಪುರ ಮಾತನಾಡಿ ವಿಶ್ವ ಸಂಸ್ಥೆಯು ನಮ್ಮ ದೇಶದಲ್ಲಿನ 80 ನದಿಗಳು ಅಪಾಯದಲ್ಲಿರುವುದನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡಿದ್ದೆ. ಪಶ್ಚಿಮಘಟದಲ್ಲಿ ರಾಜ್ಯದ ಬಹುತೇಕ ನದಿಗಳು,ತುಂಗ,ಭದ್ರೆ,ಶರವಾತಿ,ನೇತ್ರವಾತಿ ನದಿಗಳ ಉಗಮ ಸ್ಥಾನವಾಗಿದ್ದಾರು ಕೂಡ ಸರ್ಕಾರ ಅಂತಹ ಸೂಕ್ಷö್ಮ ಪ್ರದೇಶವಾದ ಪಶ್ಚಿಮ ಘಟಗಳ ಮೇಲೆ ಅಭಿವೃದ್ದಿಯ ಹೆಸರಿನಲ್ಲಿ ಮೀತಿ ಮೀರಿದ ಒತ್ತಾಡ ಹಾಕುತ್ತಿರುವುದರಿಂದ ಹಾಗೂ ನದಿಗೆ ಜಲಾಶಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ನದಿಗಳಲ್ಲಿನ ಕನಿಷ್ಟ ಹರಿವಿನ ಪ್ರಮಾಣ ಕೂಡ ಕಡಿಮೆಯಾಗಿರುವುದರಿಂದ ನದಿಗಳಲ್ಲಿ ಮಾಲಿನ್ಯ ಹೆಚ್ಚಾಳಕ್ಕೆ ಕಾರಣವಾಗುತ್ತಿದೆ.ನಾಸ ಉಪಗ್ರಹ ಚಿತ್ರದ ವರದಿಯಂತೆ 2040 ರಲ್ಲಿ ತುಂಗಭದ್ರೆ ನದಿಯಿಂದ ಕುಡಿಯುವುದಕ್ಕೆ ಮಾತ್ರ ನೀರು ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದು ವರದಿ ತಿಳಿಸುತ್ತದೆ.ನಮ್ಮ ಕೃಷಿಗೆ ನೀರು ದೊರೆಯುವುದು ಕೂಡ ಕಷ್ಟವಾಗಲಿದೆ.ತುಂಗಭದ್ರ ನದಿ ರಾಜ್ಯದ 9 ಜೀಲ್ಲೆಗಳಲ್ಲಿ ಹರಿದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೋಗುಳಾಂಬೆ ಪುಣ್ಯಕ್ಷೇತ್ರದಲ್ಲಿ ಕೃಷ್ಣ ನದಿಯೊಂದಿಗೆ ಕೂಡಿಕೊಂಡು ಹರಿಯುತ್ತಾಳೆ . ಕಡಿನ ವನಚೇದ ಶೇ33 ರಷ್ಟು ಇದ್ದಾಗ ಮಾತ್ರ ನಮಗೆ ಪ್ರಾಣವಾಯು ದೊರೆಯುವುದಕ್ಕೆ ಸಾಧ್ಯ ಅದ್ದರಿಂದ ನಾಡಿನ ಧರ್ಮಗುರುಗಳು, ರಾಜಕೀಯ ಧುರೀಣರು, ವಿಜ್ಞಾನಿಗಳು,ಪರಿಸಾರ ಪ್ರೇಮಿಗಳು,ಸಮಾಜದ ಎಲ್ಲಾ ವರ್ಗದವರು ,ರೈತರು,ಕೈಗಾರಿಕೋದ್ಯಮಿಗಳು ನದಿಗಳ ಸಂರಕ್ಷಣೆಗೆ ಮುಂದಾಗಬೇಕಾಗಿದೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿಯ ವತಿಯಿಂದ ದಕ್ಷಿಣ ಭಾರತದ ತುಂಗಭದ್ರ ನದಿಯ ಸ್ವಚ್ಚತೆಗೆ ಮುಂದಾಗಿದ್ದೇವೆ ಅದರ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ,ನಿರ್ಮಲ ತುಂಗಭದ್ರಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಶೃಂಗೇರಿಯಿAದ ಮಂತ್ರಾಲಯದ ವರೆಗೆ 600 ಕಿ.ಮೀ.ವರೆಗೆ ಒಂದು ನದಿಗಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
3 ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಸಂಚಾಲಕರಾದ ಮಹಿಮಾ ಪಾಟೀಲ್ ಮಾತನಾಡಿದರು
ದಿವ್ಯ ಸಾನಿಧ್ಯವನ್ನು ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯಶಿವಾಚಾರ್ಯ ಮಹಾಸ್ವಾಮಿಗಳು, ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಾಹಾಂತಲಿAಗ ಮಹಾಸ್ವಾಮಿಗಳು, ಮುಸ್ಲಿಂ ಧಾರ್ಮ ಗುರುಗಳಾದ ಸೈಯಾದ್ ಜೀಶನ್ ಖಾದ್ರಿ, ಸೈಯಾದ್ ಸಜ್ಜದ್ ಮತವಾಲೆ ವಹಿಸಿದರು.
ಪ್ರೊ.ಶ್ರೀಪತಿ ಐ.ಐ.ಟಿ. ಹಾಗೂ ಆರ್ಥಿಕ ಸಲಹೆಗಾರರಾದ ಪ್ರೊ.ಕುಮಾರಸ್ವಾಮಿ ನದಿಯ ಉಳಿವಿನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಪ್ರಮುಖರಾದ ಮಾಧವನ್, ಗಾಯತ್ರಿ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ರಾಜಾ ವೆಂಕಟಪ್ಪ ನಾಯಕ,ಗಂಗಾಧರನಾಯಕ, ಜಿಲ್ಲಾ ಸಂಚಾಲಕರಾದ ಎನ್. ಉದಯಕುಮಾರ ಸಾಹುಕಾರ,ತಾ.ಸಂಚಾಲಕರಾದ ಶ್ರೀಧರ ಸ್ವಾಮಿ, ಅನಿತಾನವಲಕಲ್, ಶರಣಪ್ಪಗೌಡ ನಕ್ಕುಂದಿ, ಜಗದೀಶ ಓತ್ತೂರ್, ಸೇರಿದಂತೆ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದರು.
ಪಟ್ಟಣದ ಧ್ಯಾನ ಮಂದಿರದಿAದ ಪ್ರಮುಖ ಬೀದಿಗಳಲ್ಲಿ ವೀರಗಾಸಿ ಕಲಾವಿದರು,ಡೋಳ್ಳು ಕುಣಿತ,ಸೇರಿದಂತೆ ವಿವಿಧ ಜನಪದ ಕಲಾವಿದರೊಂದಿಗೆ ಟಿ.ಎ.ಪಿ.ಸಿ.ಎಂ.ಎಸ್. ಬಯಲು ಜಾಗದ ವರೆಗೆ ನಡೆದ ನಿರ್ಮಾಲ ತುಂಗಭದ್ರ ಅಭಿಯಾನ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು.
1-ಮಾನ್ವಿ-3:
ಮಾನ್ವಿ: ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಬಯಲು ಜಾಗದಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ 3 ನೇ ಹಂತದ ಜಲಜಾಗೃತಿ-ಜನಜಾಗ್ರತಿ ಕಾರ್ಯಕ್ರಮಕ್ಕೆ ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು.

Leave a Reply

Your email address will not be published. Required fields are marked *