ಹಾಲಾಪೂರ : ಗ್ರಾಮ ಪಂಚಾಯತಿಯ ಯದ್ದಲದಿನ್ನಿ ಗ್ರಾಮದಲ್ಲಿ ಹೊಸ ವರ್ಷದ ಸ್ವಾಗತ ಸಂಭ್ರಮ ಸಡಗರ ಮಧ್ಯೆ ದುಷ್ಕರ್ಮಿಗಳಿಂದ ಬೈಕಿಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಕರಕಲು ಮಾಡಿರುವ ಕೃತ್ಯ ನಡೆದಿದೆ. ಯದ್ದಲದಿನ್ನಿ ಗ್ರಾಮದ ಮಹೇಶ ತಂದೆ ಶೇಖರಪ್ಪಗೌಡ ಸುಂಕನೂರ್ ಎಂಬುವರ ಎಚ್ಎಫ್ ಡಿಲಕ್ಸ್ ಬೈಕ್ ಸಂಪೂರ್ಣ ಸುಟ್ಟಿದೆ ಹಾಗೆ ವೀರೇಂದ್ರ ಗೌಡ ಎಂಬುವರ ಬೈಕಿಗೆ ಬೆಂಕಿ ಹಚ್ಚಿದ್ದಾರೆ ಅಷ್ಟರಲ್ಲಿ ಮನೆಯವರು ನೋಡಿ ಬೆಂಕಿಯನ್ನು ಆರಿಸಿದ್ದಾರೆ ಹಾಗೆ ಕಳೆದ ತಿಂಗಳ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದರು. ಮೇಲಿಂದ ಮೇಲೆ ಇಂಥ ಒಂದು ಘಟನೆಗಳು ಯದ್ದಲದಿನ್ನಿ ಗ್ರಾಮದಲ್ಲಿ ನಡೆಯುತ್ತಿದ್ದು ಗ್ರಾಮಸ್ಥರು ಬಹಳಷ್ಟು ಆತಂಕ ಒಳಗಾಗಿದ್ದಾರೆ ಅದಕ್ಕಾಗಿ ಸಂಬಂಧಿಸಿದ ಪೊಲೀಸ್ ಇಲಾಖೆಯವರು ಇಂಥ ಘಟನೆಗಳು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೆ ಹಾಲಾಪೂರ ಗ್ರಾಮ ಪಂಚಾಯತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲು ಹೇಳಿ ವರ್ಷ ಆಗಲು ಬಂತು ಅದರ ಬಗ್ಗೆ ಕ್ಯಾರೆ ಅನ್ನುತ್ತಿಲ್ಲ ಎಂದು ಗ್ರಾಮಸ್ಥರಾದ ಜಯಪ್ಪಗೌಡ, ಶಿವಶಂಕರಗೌಡ ಇನ್ನಿತರರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಈಗಲಾದರೂ ಪೋಲಿಸ್ ಇಲಾಖೆ ಶೀಘ್ರವೇ ಕಳ್ಳತನ, ಬೆಂಕಿ ಹಚ್ಚುವರನ್ನ ಪತ್ತೆ ಹಚ್ಚಿ ತನಿಖೆ ಮಾಡಿ ಶಿಕ್ಷಗೆ ಒಳಪಡಿಸಬೇಕು ಮತ್ತು ಹುಲ್ಲಿನ ಬಣವೆ ಬೆಂಕಿ ಹಚ್ಚಿ ಸುಟ್ಟಿರುವ ರೈತನಿಗೆ ಹಾಗೂ ಬೈಕ್ ಸುಟ್ಟಿರುವ ಮಾಲೀಕನಿಗೆ ಸೂಕ್ತ ಪರಿಹಾರ ಕೊಡಬೇಕು ಜೊತೆಗೆ ಪಂಚಾಯತಿಯವರು ಸಿಸಿ ಕ್ಯಾಮೆರಾ ಅಳವಡಿಸಬೇಕು ಇಲ್ಲವಾದರೆ ಹೊರಟ ಮಾಡಬೇಕಾಗ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *