ಮಾನ್ವಿ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಪುರಸಭೆ ಕಾರ್ಯಾಲಯ ಆವರಣದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ ಹಂಪಯ್ಯ್ ನಾಯಕ ಸಾಹುಕಾರ್ ಇವರು ಮಾನ್ವಿ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ವಾಹನಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಮಾನ್ವಿ ಪಟ್ಟಣದಲ್ಲಿ ದೈನಂದಿನ ಪುರಸಭೆಯಿಂದ ಆಗುತ್ತಿರುವ ಕಸವಿಲೆವಾರಿ 19.2 ಟನ್ನ ಗಳಷ್ಟು ಇದರಲ್ಲಿ ಶೇಕಡ 60ರಷ್ಟು ಹಸಿಕಸವಿದ್ದರೆ ಶೇಕಡ 40ರಷ್ಟು ಒಣಕಸವನ್ನು ಪುರಸಭೆಯ ಕಾರ್ಮಿಕರಿಂದ ಕಸವಿಲಿವಾರಿವಾಗುತ್ತಿದ್ದು.

ಪುರಸಭೆ ಕಾರ್ಯಾಲಯದಲ್ಲಿ ಈಗಾಗಲೇ 11 ಆಟೋ,6 ಟ್ರ್ಯಾಕ್ಟರ್ ಗಳು, 2 ಜೆ ಸಿ ಬಿ, 1, ಕಂಪ್ಯಾಕ್ಟರ ( ಲಾರಿ ) ಈ ವಾಹನಗಳಿಂದ ಪುರಸಭೆಯ ಸಿಬ್ಬಂದಿ ವರ್ಗ ಮಾನ್ವಿ ನಗರದ ದೈನಂದಿನ ಸ್ವಚ್ಛತ ಕಾರ್ಯವನ್ನು ನಡೆಸುತ್ತಿದ್ದು. ಮುಂದಿನ ದಿನಗಳಲ್ಲಿ ಮಾನ್ವಿ ಪುರಸಭೆಯು ನಗರಸಭೆನ್ನಾಗಿ ಮೇಲ್ ದರ್ಜೆ ಏರಿದಾಗ ಇನ್ನೂ ಬಹಳಷ್ಟು ಸಿಬ್ಬಂದಿ ವರ್ಗ ಹಾಗೂ ವಾಹನಗಳು ಮಾನ್ವಿ ನಗರಕ್ಕೆ ಬರುವ ಸಾಧ್ಯತೆಯಿದ್ದು ಇರುವ ವಾಹನಗಳಿಂದಲೇ ಮಾನ್ವಿ ನಗರವನ್ನು ಸ್ವಚ್ಛತೆ ಮಾಡುತ್ತಿರುವುದು ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್,ಪಂಚ ಗ್ಯಾರೆಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ಜಯಪ್ರಕಾಶ್, ಡಿ ರಾಮಕೃಷ್ಣ, ಸಾಬೀರ್ ಹುಸೇನ್, ಡಿ ವಿರೇಶ್, ಜಮೀಲ್ ಆಹೆಮದ್, ಸೈಯದ್ ನಜರುದ್ದೀನ್ ಖಾದ್ರಿ, ರೇವಣಸಿದ್ದಯ್ಯ ಸ್ವಾಮಿ, ಸುಕುಮನಿ, ಜಿಲಾನಿ ಕುರೇಶಿ, ವೆಂಕಟೇಶ್ ನಾಯಕ್, ಸತ್ತಾರ್ ಬಂಗ್ಲೆವಲೆ,ಶೇಕ್ ಮಹಿಬೂಬ್ (ಜೂಲಿ ) ರಹಮತ್ ಅಲಿ, ಚಂದ್ರು ಕಾಜಗಾರ್, ಕಾಮೇಶ್ ಮಂದಕಲ್,ಹಂಪಯ್ಯ್ ನಾಯಕ ಬೆಳಗಿನಪೇಟೆ, ರೇಣುಕಾ ರೆಡ್ಡಿ, ಕಮಲಿ ಬಾಬಾ, ಶೇರು, ಪುರಸಭೆಯ ಮುಖ್ಯ ಅಧಿಕಾರಿ ನೈರ್ಮಲ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *